1 ರಿಂದ 10 ವಾರ್ಡ್ ಗಳಿಗೆ ಕಲುಷಿತ ನೀರು ಪೂರೈಕೆ : ನಗರ ಸಭಾ ಸದಸ್ಯ ಸೋಮಶೇಖರ್ ಆರೋಪ
ರಾಮನಗರ : ರಾಮನಗರದ ಬಿಇಒ ಕಚೇರಿ ಪಕ್ಕದಲ್ಲಿರುವ ನೆಹರೂ ಉದ್ಯಾನವನದಲ್ಲಿ ನಗರಸಭೆಯ ತ್ಯಾಜ್ಯ ಸಂಗ್ರಹಿಸುವ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತ್ಯಾಜ್ಯದ ವಾಹನಗಳಲ್ಲಿನ ನೀರು 1 ರಿಂದ 10 ನೇ ವಾರ್ಡ್ ಗೆ ನೀರು ಪೂರೈಸುವ ನೀರಿನ ವಾಲ್ ಗೆ ಹೋಗುತ್ತಿದೆ. ಇದರಿಂದ ನಾಗರಿಕರು ಕಲುಷಿತ ನೀರನ್ನು ಕುಡಿದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಜಲಮಂಡಳಿ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಕಲುಷಿತ ನೀರು ಪೂರೈಸುವದನ್ನು ನಿಲ್ಲಿಸಬೇಕು ಎಂದು ನಗರಸಭೆ ಸದಸ್ಯ ಸೋಮಶೇಖರ್ ತಿಳಿಸಿದರು.