ಬಿಜೆಪಿ ಯುವ ಮೋರ್ಚಾ ವತಿಯಂದ ಪೌರಕಾರ್ಮಿಕರಿಗೆ ರಾಷ್ಟ್ರ ಧ್ವಜ ವಿತರಣೆ

ರಾಮನಗರ : ಇಲ್ಲಿನ ನಗರಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಕ್ಷಾ ಬಂಧನ ಆಚರಣೆಯ ಅಂಗವಾಗಿ ರಾಖಿಗಳನ್ನು ಕಟ್ಟಿ ಸಿಹಿ ವಿತರಿಸಲಾಯಿತು. ಜೊತೆಗೆ ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಗಳನ್ನು ವಿತರಿಸಲಾಯಿತು.

ಸಮಾಲೋಚನೆ ಪತ್ರಿಕೆ ಸಂಪಾದಕರಾದ ಕೆ. ನರಸಿಂಗ್ ರಾವ್ ಅವರಿಗೆ ರಾಷ್ಟ್ರ ಧ್ವಜ ವಿತರಣೆ

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬುಲ್ ಬುಲ್ ಮಿಸ್ತ್ರ ಮಾತನಾಡಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ನಾಗರಿಕರ ಮನೆಗಳಲ್ಲಿ ಹಗಲು ರಾತ್ರಿ ರಾಷ್ಟ್ರ ಧ್ವಜವನ್ನು ಹಾರಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದೆ. ಎಲ್ಲರೂ ರಾಷ್ಟ್ರಧ್ವಜಗಳನ್ನು ತಮ್ಮ ಮನೆಗಳ ಮೇಲೆ ಹಾರಿಸಬೇಕು ಎಂದು ತಿಳಿಸಿದರು.

ಸಮಾಜ ಸೇವಕರು, ಹಿರಿಯ ವೈದ್ಯರಾದ ಡಾ.ಕೆ.ಪಿ. ಹೆಗ್ಡೆ ಅವರಿಗೆ ರಾಷ್ಟ್ರ ಧ್ವಜ ವಿತರಣೆ

ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಶಿವಮಾದು, ನಿರ್ದೇಶಕ ಡಿ. ನರೇಂದ್ರ, ಜಿಲ್ಲಾ ಕೆಡಿಪಿ ಸದಸ್ಯ ಸಂಜಯ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗದೀಶ್ ಆರ್ ಚಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ್, ನಗರ ಮಂಡಲ ಅಧ್ಯಕ್ಷ ಪಿ. ಶಿವಾನಂದ, ಮುಖಂಡರಾದ ಬಿ. ನಾಗೇಶ್, ಪದ್ಮನಾಭ್, ಸಿದ್ದರಾಜು, ಚೇತನ್, ಹನುಮೇಶ್, ಹೇಮಾವತಿ, ಲೋಕೇಶ್, ಸಮಂತಾ ಇತರರು ಇದ್ದರು.

Leave a Reply

Your email address will not be published. Required fields are marked *