ಜಿಲ್ಲಾ ಕ್ಷತ್ರಿಯ ಸಮುದಾಯಗಳ ಜಾಗೃತಿ ಸಭೆ
ರಾಮನಗರ : ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಜಿಲ್ಲಾ ಕ್ಷತ್ರಿಯ ಸಮುದಾಯಗಳ ಜಾಗೃತಿ ಸಭೆಯನ್ನು ನಗರದ ಆರ್.ವಿ.ಸಿ.ಎಸ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಒಳ ಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ಕ್ಷತ್ರಿಯ ಸಮುದಾಯಗಳನ್ನು ಒಟ್ಟುಗೂಡಿಸಿ ಏಕತೆಯನ್ನು ಸ್ಥಾಪಿಸುವ ಕಾರ್ಯದಲ್ಲಿ ಈಗಾಗಲೇ ಸಕ್ರಿಯರಾಗಿರುವ ಕರ್ನಾಟಕ ಕ್ಷತ್ರಿಯ ಒಕ್ಕೂಟ “ಕ್ಷತ್ರಿಯ ಸಮುದಾಯದ ಜಾಗೃತಿ ಸಭೆ” ಯ ಮೂಲಕ “ಕ್ಷತ್ರಿಯ ವಿರಾಸತ್” ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಮಾತನಾಡಿ ಕ್ಷತ್ರೀಯ ಸಮಾಜವು ಮರಾಠ, ಅರಸು, ರಾಜು ಕ್ಷತ್ರಿಯ, ಭಾವಸಾರ, ಸಹಸ್ರಾರ್ಜುನ ಕ್ಷತ್ರಿಯ, ರಜಪೂತ ಕ್ಷತ್ರಿಯ, ತಿಗಳ ಹಾಗೂ ಮೂವತ್ತಕ್ಕೂ ಹೆಚ್ಚು ಒಳ ಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿದೆ. ಈ ಎಲ್ಲಾ ಒಳ ಪಂಗಡಗಳು ಒಂದಾದರೆ, ಕರ್ನಾಟಕದಲ್ಲಿ 8ರಿಂದ 9 ಲೋಕಸಭಾ ಸದಸ್ಯರನ್ನು, 30ರಿಂದ 35 ಶಾಸಕರನ್ನು ಆರಿಸಿ ತರಬಹುದಾಗಿದೆ ಎಂದರು.
ಕ್ಷತ್ರಿಯ ಸಮಾಜವು ಒಂದಾದರೆ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕರ್ನಾಟಕದಲ್ಲಿ ಅಭಿವೃದ್ಧಿ ಸಾಧಿಸಬಹುದು. ಆದ್ದರಿಂದ ಒಗ್ಗೂಡಿಸಲು ಏಕತೆ, ಜಾಗೃತಿ, ಅಭಿವೃದ್ಧಿಯ ಮಂತ್ರ ಸಾರಬೇಕಾಗಿದೆ. ಜಾತಿ ವ್ಯವಸ್ಥೆಯನ್ನು ಆಧರಿಸಿರುವ ಕರ್ನಾಟಕದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಮಹಾನ್ ಕ್ಷತ್ರಿಯ ಪರಂಪರೆ ಅವನತಿಯ ಅಂಚಿಗೆ ತಲುಪುವ ಅಪಾಯವೂ ಇದೆ ಎಂದು ಜಾಗೃತಿ ಮೂಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಕೆ.ಒ ಮಾಹಿಳಾ ಅಧ್ಯಕ್ಷರಾದ ಉಮಾ ಮೂರ್ತಿರಾವ್ ಅವರು ಶ್ರೀರಾಮ, ಶ್ರೀಕೃಷ್ಣ, ಶ್ರೀಸಹಸ್ರಾರ್ಜುನ ಮಹರಾಜರು, ಪಾಂಡವರು, ಶ್ರೀವನ್ನಿರಾಯ ಸ್ವಾಮಿ, ಶ್ರೀಮಹಾರಾಣಾ ಪ್ರತಾಪ, ಶ್ರೀ ಶಿವಾಜಿ ಮಹಾರಾಜರು, ಶ್ರೀಸಂತ ನಾಮದೇವ ಮಹಾರಾಜರು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಹೀಗೆ ಅನೇಕ ಮಹಾನೀಯರು ಜನಿಸಿರುವ ಕ್ಷತ್ರಿಯ ಪರಂಪರೆಯನ್ನು ಉಳಿಸಿ, ಬೆಳೆಸುವುದು ಯುವಕರ ಮುಖ್ಯ ಜವಾಬ್ದಾರಿಯಾಗಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ರಾಮನಗರ ಜಿಲ್ಲಾ ಕ್ಷತ್ರಿಯ ಮುಖಂಡರಾದ ನರೇಂದ್ರ, ಕವಿತಾರಾವ್, ಗಜೇಂದ್ರ ಸಿಂಗ್, ನರಸಿಂಹರಾಜೇ ಅರಸ್, ರಾಜಣ್ಣ ಮತ್ತು ಸೂರ್ಯನಾರಾಯಣ, ಸೋಮಶೇಖರ್ ರಾವ್, ಕೂಡ್ಲೂರು ಲಕ್ಷ್ಮಿ ಕಿಶೋರ್ ಅರಸ್, ಬಾಬುರಾವ್, ದಾಸಪ್ಪ, ಮಣಿ, ನಂಜುಂಡರಾಜೇ ಅರಸ್, ಲಕ್ಷ್ಮಿಪತಿರಾಜು, ಮುಂತಾದ ಅನೇಕ ಸಮಾಜ ಬಂಧುಗಳು ಭಾಗವಹಿಸಿ ಕ್ಷತ್ರಿಯ ಸಮಾಜವನ್ನು ಸದೃಢಗೊಳಿಸುವ ವಾಗ್ದಾನ ಮಾಡಿದರು.

ಕ್ಷತ್ರಿಯ ಸಮಾಜದ ಒಳ ಪಂಗಡಗಳು
- ಹಿಂದೂ ಕ್ಷತ್ರಿಯ
- ಅರಸು ಕ್ಷತ್ರಿಯ
- ರಾಜು ಕ್ಷತ್ರಿಯ
- ಭಾವಸಾರ ಕ್ಷತ್ರಿಯ
- ಸೋಮವಂಶಿ ಸಹಸ್ರಾರ್ಜುನ ಕ್ಷತ್ರಿಯ
- ರಜಪೂತ ಕ್ಷತ್ರಿಯ
- ಚೌಹಾನ್ ಕ್ಷತ್ರಿಯ
- ಆರ್ಯ ಕ್ಷತ್ರಿಯ
- ಮರಾಠಾ ಕ್ಷತ್ರಿಯ
- ಸೋಮವಂಶಿ ಆರ್ಯ ಕ್ಷತ್ರಿಯ
- ಲಾಡ್ ಕ್ಷತ್ರಿಯ
- ರಾಮ ಕ್ಷತ್ರಿಯ
- ಕೊಂಕಣ ಮರಾಠಾ ಕ್ಷತ್ರಿಯ
- ಉಪ್ಪಾರ ಕ್ಷತ್ರಿಯ
- ಯಾದವ ಕ್ಷತ್ರಿಯ
- ರಾಠೋಡ್ ಕ್ಷತ್ರಿಯ
- ಸೂರ್ಯವಂಶ ಕ್ಷತ್ರಿಯ ಸಮಾಜ
- ನಾಮದೇವ ಸಿಂಪಿ ಕ್ಷತ್ರಿಯ
- ಶಿವಾಜಿ ಮರಾಠಾ ಕ್ಷತ್ರಿಯ
- ತಿಗಳ ಕ್ಷತ್ರಿಯ
- ಕುಮಾರ ಕ್ಷತ್ರಿಯ
- ಸೋಮವಂಶಿ ಆರ್ಯ (ಚಿತ್ರಗಾರ)
- ಸೋಮವಂಶಿ ಆರ್ಯ (ಸರಿಗೆ)
- ಹಕ್ಕಿ ಪಿಕ್ಕಿ ಸಮಾಜ
- ಶಿಳ್ಯೆಕ್ಯಾತ (ಕಿಲ್ಯೆಕ್ಯಾತ, ಕಟುಬರ)
- ಜೋಗಿ ಕ್ಷತ್ರಿಯ
- ಗೋಂಧಳಿ ಕ್ಷಾತ್ರಿಯ
- ವನ್ನಿಕುಲ ಕ್ಷತ್ರಿಯ
- ಶಂಭುಕುಲ ಕ್ಷತ್ರಿಯ
- ಲಂಬಾಣಿ ಸಮಾಜ
- ಮಲ್ಲ ಕ್ಷತ್ರಿಯ
- ಅಗ್ನಿವಂಶ ಕ್ಷತ್ರಿಯ
- ಸೂರ್ಯವಂಶಿ ನಾವಿ ಕ್ಷತ್ರಿಯ
- ಸಿರವಿ ಸಮಾಜ
- ರಾವತ್ ಕ್ಷತ್ರಿಯ
- ಫುಲ್ ಮಾಲಿ
- ತೋಗಟ ವೀರ ಕ್ಷತ್ರಿಯ
- ಗೌಳಿ ಕ್ಷತ್ರಿಯ
- ಸ್ವಕುಳ ಸಾಲಿ ಕ್ಷತ್ರಿಯ, ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಕ್ಷತ್ರಿಯ ಸಮಾಜದಿಂದ ಹೊರಗುಳಿದ ಮತ್ತಷ್ಟು ಪಂಗಡಗಳು