ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿರುವ ಶಸ್ತ್ರ ಚಿಕಿತ್ಸಕಿ ಡಾ.ಜಿ.ಎಲ್. ಪದ್ಮಾ ಅವರಿಗೆ ಅಭಿನಂದನೆಗಳು : ಕೆ. ಸತೀಶ್
ರಾಮನಗರ : ಇಲ್ಲಿನ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಜಿ.ಎಲ್. ಪದ್ಮಾ ಅವರಿಗೆ ಆರೋಗ್ಯ ಇಲಾಖೆಯು 2022ನೇ ಸಾಲಿನಲ್ಲಿ ಉತ್ತಮ ಸೇವೆಗಾಗಿ ಬಿ.ಸಿ. ರಾಯ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
2022ನೇ ಸಾಲಿನಲ್ಲಿ ಉತ್ತಮ ಸೇವೆಗಾಗಿ ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿರುವ ರಾಮನಗರ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ಜಿ.ಎಲ್. ಪದ್ಮಾ ಅವರಿಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತೀಶ್ ಅಭಿನಂದಿಸಿದ್ದಾರೆ.