ಸಾಲ ಕೊಟ್ಟಿದ್ದೇ ತಪ್ಪೇ ? : ಕೊಟ್ಟಿದ್ದ ಹಣವನ್ನು ಕೇಳಿದ ಕೆಂಪಮ್ಮನನ್ನು ಕೊಲೆ ಮಾಡಿದ ಅಚ್ಚಲು ಗ್ರಾಮದ ಲಿಂಗರಾಜು, ರವಿ
ರಾಮನಗರ : ಆಕೆ ಮಾಡಿದ ಅದೊಂದು ತಪ್ಪು ಎಂದರೆ, ತನಗೆ ಕೊಡಬೇಕಿದ್ದ ಸಾಲದ ಹಣವನ್ನು ಕೇಳಿದ್ದು. ಇದೇ ಆಕೆಯ ಜೀವಕ್ಕೆ ಎರವಾಯ್ತು. ಕೊಟ್ಟಿದ್ದಾ ಸಾಲ ಕೇಳಿದ್ದೆ ತಪ್ಪಾಯ್ತೆ…! ಆಕೆಯನ್ನು ಮುಗಿಸಿ ಸಾಲ ತೀರಿಸುವ ಜೊತೆಗೆ ಬೇರೆ ಕಡೆ ಮಾಡಿದ್ದ ಸಾಲವನ್ನೂ ತೀರಿಸುವ ಸಲುವಾಗಿ ಸಂಚು ಹೂಡಿ ಆಕೆಯನ್ನು ಕೊಂದೇ ಬಿಟ್ಟರು. ಇದು ಒಂದು ಕ್ರೈಂ ಸಿನಿಮಾ ರೀತಿಯಲ್ಲಿ ಕೊಲೆ ಮಾಡಲಾಗಿದೆ.

ಇದು ಸೆ.8ರಂದು ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಕೆಂಪಮ್ಮ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ಕಾಡಿನಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಮನೆಗೆ ವಾಪಾಸ್ ಕರೆ ತರಲು ಹೋಗಿದ್ದ ಕೆಂಪಮ್ಮ (49) ರನ್ನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಿಂಗರಾಜು (19) ಮತ್ತು ರವಿ (20) ಹಾಗೂ ಅಪ್ರಾಪ್ತ ಬಾಲಕನೊಬ್ಬ ಸೇರಿಕೊಂಡು ಕೊಲೆ ಮಾಡಿ 51 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಕೊಟ್ಟಿದ್ದ ಸಾಲವೇ ಕೊಲೆಗೆ ಕಾರಣವಾಯ್ತು –
ಕೊಲೆಯಾದ ಕೆಂಪಮ್ಮ ಅಚ್ಚಲು ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿದ್ದು ಈ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದರು. ಇವರಲ್ಲಿ ಲಿಂಗರಾಜು ಈಕೆಯ ಬಳಿ 600 ರೂ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಹೊರಗೂ ತನ್ನ ಚಟಗಳಿಗಾಗಿ 15 ಸಾವಿರ ರೂ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿಯೂ ಸಹ ಸಾಲದ ಸುಳಿಯಲ್ಲಿ ಸಿಲುಕಿದ್ದ, ಆತನಿಗೂ ಕೂಡ ಸೆ.8ರಂದು ಅಂಗಡಿಗೆ ಹೋಗಿದ್ದ ಲಿಂಗರಾಜುವಿಗೆ ಕೆಂಪಮ್ಮ ಹಣ ವಾಪಾಸ್ ಕೊಡುವಂತೆ ಒತ್ತಾಯಿಸಿದ್ದಾಳೆ.
ಇದರಿಂದ ಕುಪಿತಗೊಂಡ ಲಿಂಗರಾಜು ಮತ್ತು ಇತರರು ಹಸು ಕರೆತರಲು ಹೋಗಿದ್ದ ಕೆಂಪಮ್ಮ ನನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ, ನಂತರ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅರ್ಕಾವತಿ ನದಿ ದಡದಲ್ಲಿ ಬಿಟ್ಟು ಹೋಗಿದ್ದರು.
ಕೊಲೆ ಮಾಡಿದ ನಂತರ ಚೀಲದಲ್ಲಿ ಕೆಂಪಮ್ಮ ಶವನ್ನು ಕಟ್ಟಿ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿಯಲ್ಲಿ ಎಸೆದು, ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಯೋಜನೆಯನ್ನು ಆರೋಪಿಗಳು ಮಾಡಿದ್ದರು. ಆದರೆ ಮತ್ತೊಂದು ದಡದಲ್ಲಿ ಕೆಲವರು ಮೀನು ಹಿಡಿಯುತ್ತಿದ್ದರು. ಒಂದು ವೇಳೆ ಚೀಲವನ್ನು ನದಿಗೆ ಎಸೆದರೆ ಖಂಡಿತವಾಗಿ ಸಿಕ್ಕಿ ಬೀಳುತ್ತೇವೆ ಎನ್ನುವ ಆತಂಕದಲ್ಲಿ ನದಿಯ ಪಕ್ಕದಲ್ಲಿಯೇ ಬಿಟ್ಟು ಪರಾರಿ ಆಗಿದ್ದರು.
ಸಾಲ ತೀರಿಸುವ ಸಲುವಾಗಿಯೇ ಕೊಲೆ ಮಾಡಿದ ಒಡವೆ ದೋಚಿದ್ದ ಆರೋಪಿಗಳು ತಾಳಿಯನ್ನು ಮಾತ್ರ ಕದಿಯುವ ಮನಸ್ಸು ಮಾಡಿರಲಿಲ್ಲ. ತಾಳಿ ಕದಿಯುವುದು ಮಹಾ ಪಾಪ ಎನ್ನುವ ಕಾರಣಕ್ಕೆ ಚಿನ್ನದ ಸರ ಕದ್ದರೂ ತಾಳಿಯನ್ನು
ಅಲ್ಲಿಯೇ ಉಳಿಸಿದ್ದರು. ಒಟ್ಟಾರೆ ಕದಿದ್ದ 21 ಗ್ರಾಂ ಚಿನ್ನವನ್ನು ಮೂವರು ಹಂಚಿಕೆ ಮಾಡಿಕೊಂಡಿದ್ದರು ಎಂದು ರಾಮಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಮೋಹನ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಗಿರಿರಾಜ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.