ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಸೈಯದ್ ಸಾದತ್ ಉಲ್ಲಾ ಸಕಾಫ್

ಚನ್ನಪಟ್ಟಣ : ಇಲ್ಲೊಬ್ಬರು ಮುಸ್ಲಿಂ ಮುಖಂಡರಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಹಿಂದೂ ದೇವಾಲಯ ಕಟ್ಟಿಸುತ್ತಿದ್ದಾರೆ. ತಮ್ಮ ಸ್ವಂತ ಹಣ ಖರ್ಚು ಮಾಡಿ ಹಿಂದೂ ದೇವಾಲಯ ಕಟ್ಟುವ ಮೂಲಕ ಹಿಂದೂ-ಮುಸ್ಲಿಂ ಜನಾಂಗದವರು ಎಂದಿಗೂ ಸಾಮರಸ್ಯೆ ಇರಬೇಕೆಂದು ಬಯಸ್ತಾರೆ. ಹಣ ಮುಖ್ಯವಲ್ಲ ನಾವ್ ಮಾಡೋ ಸೇವೆ ನಿಸ್ವಾರ್ಥತೆಯಿಂದ ಇರಬೇಕೆಂದು ಬಯಸ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕೋಟ್ಯಾಂತರ ರೂ ಖರ್ಚು ಮಾಡಿ ನಿರ್ಮಿಸಿದ ಬಸವೇಶ್ವರ ದೇವಸ್ಥಾನ ಚಾಲನೆ ಸಿಗಲಿದೆ. ಹಾಗಾದ್ರೆ ಆ ನಿಸ್ವಾರ್ಥಿ ಮುಸ್ಲಿಂ ಮುಖಂಡರು ಯಾರು ಗೊತ್ತಾ…!

ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮುಸ್ಲಿಂ ಮುಖಂಡ –

ಇವರ ಹೆಸರು ಸೈಯದ್ ಸಾದತ್ ಉಲ್ಲಾ ಸಕಾಫ್. ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದವರು. ಹುಟ್ಟಿದ ಮೇಲೆ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ನಿಸ್ವಾರ್ಥ ಸೇವೆಯನ್ನ ಮಾಡಿಕೊಂಡು ಬರುತ್ತಿದ್ದಾರೆಂದ್ರೆ ಅತಿಶಯೋಕ್ತಿಯಲ್ಲ. ಎಲೆ ಮರೆ ಕಾಯಿಯಂತೆ ನಿಸ್ವಾರ್ಥ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಯಾವುದೇ ಜಾತಿ ಭೇದ ಇವರ ಬಳಿ ಸುಳಿಯಲ್ಲ.

ಇನ್ನ ದೇಶದೆಲ್ಲೆಡೆ ಹಿಂದೂ ಮುಸ್ಲಿಂ ಸೌಹಾರ್ದತೆ ಹಾಗೂ ಶಾಂತಿ ಸಹಬಾಳ್ವೆ ಇರಬೇಕೆಂದು ಹಲವು ನಾಯಕರು ಶಾಂತಿ‌ ಸಂದೇಶ ಸಾರುತ್ತಾರೆ ಅಷ್ಟೇ. ಆದ್ರೆ ಚನ್ನಪಟ್ಟಣ ಕ್ಷೇತ್ರದ ಸೈಯದ್ ಸಾಕಾಫ್ ರವರು ಮಾತನಾಡುವ ಮೊದಲು ಅದನ್ನ ಕಾರ್ಯಗತ ಮಾಡಲು ಹೊರಟಿದ್ದಾರೆ. ತಮ್ಮ ಸ್ವಂತ ಹಣ ಖರ್ಚು ಮಾಡಿ ಹಿಂದೂ ದೇವಾಲಯನ್ನ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿದ್ದಾರೆ. ಇದಲ್ಲದೆ ಒಂದೇ ಕಾಪೌಂಡಿನ ಒಳಗೆ ಮುಸ್ಲಿಂ ಮಸೀದಿಯನ್ನ ಕೂಡ ನಿರ್ಮಾಣ ಮಾಡಿದ್ದು, ಹಿಂದೂ ಮುಸಲ್ಮಾನ್ ಬಾಂದವರ ಭಾವೈಕ್ಯತೆಯನ್ನ ಸಾರಿದ್ದಾರೆ.

ಇವರೊಬ್ಬರು ಮುಸ್ಲಿಂ ಮುಖಂಡರಾದ್ರು ಕೂಡ ಹಿಂದುಗಳ ಮೇಲೆ ಅಪಾರ ಪ್ರೇಮವಿದೆ. ತಮ್ಮ ಕ್ಷೇತ್ರದ ಜನರು ಸಾಮರಸ್ಯ ದಿಂದ ಇರಬೇಕೆಂಬ ಉದ್ದೇಶದಿಂದಲೇ ೨೦೧೦ ರಲ್ಲೆ ದೇಗುಲ ಕಟ್ಟಲಾಗಿದೆ. ಈ ದೇವಸ್ಥಾನದ ಉದ್ಘಾಟನೆಯನ್ನ ದಿವಂಗತ ಸಿದ್ದಗಂಗಾ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಚಾಲನೆ ಕೊಡಿಸಿದ ಕೀರ್ತಿ ಇವರಿಗೆ ಸಲ್ಲಲಿದೆ. ಇದಲ್ಲದೆ ಚನ್ನಪಟ್ಟಣ ನಗರದ ಮಂಗಳವಾರಪೇಟೆಯಲ್ಲಿ ಇವರೇ ತಮ್ಮ ಸ್ವಂತ ಖರ್ಚು ಮಾಡಿ ಬಸವೇಶ್ವರ ದೇವಸ್ಥಾನ ಕಟ್ಟುತ್ತಿದ್ದಾರೆ. ಈ ದೇವಸ್ಥಾನದ ಉದ್ಘಾಟನೆಯನ್ನ ಬಹಳ ಅದ್ಧೂರಿಯಾಗಿ ಮಾಡಲು ಅವರು ತೀರ್ಮಾನಿಸಿದ್ದಾರೆ. ಇದೇ ಉದ್ದೇಶದಿಂದ ಬಸವೇಶ್ವರ ದೇಗುಲದ ಕಾಮಗಾರಿ ‌ವಿಕ್ಷಣೆಗೆಂದು ಆಗಮಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ದೇವಸ್ಥಾನದ ಅಂತಿಮ ರೂಪ ಬರಲಿದ್ದು ದೇವಾಲಯದ ಚಾಲನೆಯನ್ನ ಅದ್ಧೂರಿಯಾಗಿ ನೆರೆವೇರಿಸುವ ಯೋಜನೆ ರೂಪಿಸಿದ್ದಾರೆ.

ಈ ಮುಸ್ಲಿಂ ಮುಖಂಡರು ನಿರ್ಮಿಸಿದ ಸಂತೇಮೊಗೇನಹಳ್ಳಿ ಗ್ರಾಮದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಈ ಗ್ರಾಮದಲ್ಲಿ ಹಿಂದೂ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಮುಸ್ಲಿಂ ಬಾದಂವರು ಬರ್ತಾರೆ. ಹಾಗೆಯೇ ಮುಸ್ಲಿಂ ಬಾಂದವರ ನಡೆಸುವ ಗಂಧ ಮಹೋತ್ಸವ ಕ್ಕೆ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಈ ಮೂಲಕ ಈ ಗ್ರಾಮ ಹಿಂದೂ ಮುಸ್ಲಿಂ ಭಾವೈಕ್ಯತೆ ಗ್ರಾಮವೆಂದು ಕೂಡ‌ಈ ಗ್ರಾಮವನ್ನ ಕರೆಯಲಾಗುತ್ತದೆ.

ಗಣೇಶ ಮೂರ್ತಿ ಪ್ರತಿಷ್ಟಾಪಿಸಿದವರಿಗೆ ನೆರವಿನ ಹಸ್ತ –

ಮಂಗಳವಾರ ಪೇಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವೇಶ್ವರ ದೇವಸ್ಥಾನ ನೋಡಿದ ನಂತರ ಸುತ್ತ ಮುತ್ತಲು ಗಣಪತಿ ವಿಗ್ರಹ ಪ್ರತಿಷ್ಟಾಪಿಸಿದ್ದ ತಮ್ಮ ಹಣ ನೀಡುವ ಮೂಲಕ‌ ಇಲ್ಲೂ ಕೂಡ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ ಎಂದರೆ ಅತಿಶಯೋಕ್ತಿಯೆನಲ್ಲ. ಯಾವಾಗಲೂ ಇವರು ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಕೂಡಿರಬೇಕು ಅಣ್ಣ ತಮ್ಮಂದಿರ ಹಾಗೆ ಕೊನೆಯ ವರೆಗೂ ಕೂಡ ಇರಬೇಕೆಂದು ದೇವರ ಬಳಿ ಕೇಳುತ್ತೇನೆ ಎಂದು ಇವರು ಹೇಳುತ್ತಲೆ ಇರುತ್ತಾರೆ.

ಒಟ್ಟಾರೆ ಜಾತಿ ಜಾತಿಗಳ ನಡುವೆ ವೈಮನಸ್ಸು ಹುಟ್ಟಿಕೊಳ್ಳುತ್ತಿರುವ ಈ ಕಾಲದಲ್ಲಿ ಸೈಯದ್ ಸಾಕಫ್ ರಂತಹ ವ್ಯಕ್ತಿಗಳು ಇದ್ರೆ ಅದ್ಯಾವುದಕ್ಕೂ ಅವಕಾಶ ನೀಡೋದಿಲ್ಲ. ಇವರು ಮಾಡಿಕೊಂಡು ಬರುತ್ತಿರುವ ನಿಸ್ವಾರ್ಥ ಸೇವೆಗೆ ಅಭಿನಂದನೆ ಸಲ್ಲಿಸಲಾಗುತ್ತೆ.

Leave a Reply

Your email address will not be published. Required fields are marked *