ಜೈಲಿನಲ್ಲಿ ಕೈದಿಯ ಹುಟ್ಟುಹಬ್ಬ ಆಚರಣೆ ; ಜಿಲ್ಲಾ ಕಾರಾಗೃಹದ ಮೇಲೆ ಪೋಲಿಸರ ರೇಡ್
ರಾಮನಗರ : ಮಂಗಳವಾರ ಸಂಜೆ ರಾಮನಗರ ಜೈಲಿನ ಮೇಲೆ ರೇಡ್ ನಡೆದಿದ್ದು, ಜೈಲು ಸಿಬ್ಬಂದಿ ಹಾಗೂ ಕೈದಿಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಎಸ್ಪಿ ಕೆ. ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ತಂಡ ಜೈಲಿನ ಕೊಠಡಿಗಳ ಪರಿಶೀಲನೆ ನಡೆಸಿದೆ.
ಜೈಲಿನಲ್ಲಿ ಬೀಡಿ, ಸಿಗರೇಟ್, ಗಾಂಜಾ, ಮೊಬೈಲ್, ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದವು. ಕಳೆದ ಎರಡು ದಿನಗಳ ಹಿಂದೆ ಕೈದಿಯೊಬ್ಬ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಫೋಟೋ ವೈರಲ್ ಆಗಿತ್ತು. ಮೈಸೂರು, ರಾಮನಗರದ ಸುಮಾರು 30 ಪೊಲೀಸರು ಸರ್ಚ್ ಮಾಡಿದ್ಧಾರೆ. ರೇಡ್ ವೇಳೆ ಎರಡು ಮೊಬೈಲ್, ಗಾಂಜಾ, ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.