ಅಂಚೆ ಇಲಾಖೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನುಮ ದಿನದ ಶುಭಾಶಯ ತಿಳಿಸಿ

ರಾಮನಗರ : ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಹುಟ್ಟು ಹಬ್ಬ. ಅಂದು ದೇಶದ ಅನೇಕರು, ಅವರಿಗೆ ಶುಭಾಶಯಗಳನ್ನು ಅವರದ್ದೇ ಆದ ರೀತಿಯಲ್ಲಿ ಸಲ್ಲಿಸುತ್ತಾರೆ. ಆದೆ ರೀತಿ ಅಂಚೆ ಇಲಾಖೆಯು ಸಹ ತಮ್ಮ ಗ್ರಾಹಕರು ಪ್ರಧಾನಮಂತ್ರಿಗಳಿಗೆ ಶುಭಾಷಯ ಸಲ್ಲಿಸಲು e-post ಎಂಬ ಉತ್ತಮ ಸೇವೆಯನ್ನು ಬಳಸಿಕೊಳ್ಳಲು ತಿಳಿಸಬಯಸುತ್ತದೆ.
e-post ಸೇವೆಯು ಒಂದು ಆಧುನಿಕ ತಂತ್ರಜ್ಞಾನ ಸೇವೆ ಯಾಗಿದ್ದು, ಇದರಲ್ಲಿ ಗ್ರಾಹಕರು ನೀಡುವ ಸಂದೇಶ/ಶುಭಾಶಯಗಳನ್ನು ಸ್ಕಾನ್ ಮಾಡಿ ಪ್ರಧಾನಮಂತ್ರಿಗಳ ಕಚೇರಿ/ ನಿವಾಸದ ಹತ್ತಿರದ ಅಂಚೆ ಕಚೇರಿಗೆ email ಮೂಲಕ ಕಳುಹಿಸಲಾಗುತ್ತದೆ, ಅಲ್ಲಿ ಅದನ್ನು print ತೆಗೆದು ಅವರ ಕಚೇರಿಗೆ/ಮನೆಗೆ ತಲುಪಿಸುವ ವ್ಯವಸ್ಥೆ ಇದಾಗಿದ್ದು, ಇದಕ್ಕೆ ಅಂಚೆ ಇಲಾಖೆ ಕೇವಲ 10 ರೂಪಾಯಿ ನಿಗದಿಮಾಡಿದೆ.

e-post ಮೂಲಕ ಪ್ರಧಾನಮಂತ್ರಿಗಳಿಗೆ ಶುಭಾಶಯ ತಿಳಿಸಲು ಇಚ್ಚಿಸುವ ಗ್ರಾಹಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ e-post ನ ಅರ್ಜಿಯನ್ನು ಭರ್ತಿ ಮಾಡಿ 10ರೂ ಶುಲ್ಕ ಪಾವತಿಸಿದರೆ, ಆ ದಿನವೇ ತಮ್ಮ ಶುಭಾಶಯ/ಸಂದೇಶವನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಅಂಚೆ ಇಲಾಖೆಯ ಈ ಹೊಸ ಸೇವೆಯ ಮೂಲಕ ಪ್ರಧಾನಮಂತ್ರಿಗಳಿಗೆ ಶುಭಾಶಯ ತಿಳಿಸಿ ಮತ್ತು ಅಂಚೆ ಇಲಾಖೆಯ ಈ ಸೇವೆಯನ್ನು ಉತ್ತೇಜಿಸಿ. ಈ ಸೇವೆಯ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಅಂಚೆ ಕಚೇರಿಗಳನ್ನು ಸಂಪರ್ಕಿಸಬೇಕು ಎಂದು ಅಂಚೆ ಅದೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.