ಕುದೂರು : ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ
ಕುದೂರು : ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುದೂರು ಠಾಣೆ ಪೊಲೀಸರು ಬಂಧಿಸ್ದಿದಾರೆ.
ಬೆಂಗಳೂರು ಕೆಂಗೇರಿ ಉತ್ತರಹಳ್ಳಿ ರೋಡ್ ಶ್ರೀನಿವಾಪುರ ಕಾಲೋನಿ ವಾಸಿ ರಂಗನಾಥ ಮತ್ತು ಮಂಜು ಬಂಧಿತರು. ಇವರಿಂದ 2 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ದಾರೆ.
ಕಳೆದ ಸೆ.21ರಂದು ಸೋಲೂರು ವಾಸಿ ಗಂಗಮ್ಮ ಮನೆಯ ಬಳಿ ಬಟ್ಟೆ ಒಗೆಯುತ್ತಿದ್ದರು. ಈ ವೇಳೆ ಆರೋಪಿಗಳು ಬೈಕಿನಲ್ಲಿ ಬಂದು ಮಾಗಡಿಗೆ ಹೋಗುವ ವಿಳಾಸ ಕೇಳುವ ನೆಪದಲ್ಲಿ ಕೆಳಗಿಳಿದು ಬಂದು ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಮಾಗಡಿ ಉಪವಿಭಾಗದ ಪೊಲೀಸ್ ಉಪಾದೀಕ್ಷಕ ಯು.ಡಿ. ಕೃಷ್ಣಕುಮಾರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್, ಪ್ರೊಭೇಷನರಿ ಪಿಎಸ್ಐ ಮಹಮ್ಮದ್ ಅಲ್ಲಾವುದ್ದೀನ್ , ಪೇದೆಗಳಾದ ಮಾರುತಿ ಕುಮಾರ್, ಗುರುಮೂರ್ತಿ, ಸತೀಶ್, ಶಿವರಾಜು, ಪುರುಷೋತ್ತಮ್ , ಲೋಹಿತ್ ಕುಮಾರ್ ಅವರನ್ನೊಳಗೊಂಡಂತೆ ವಿಶೇಷ ತಂಡ ರಚಿಸಲಾಗಿತ್ತು.
ಪ್ರಕರಣ ತನಿಖೆ ನಡೆಸಿದ ತಂಡವು ಆರೋಪಿಗಳಾದ ರಂಗನಾಥ ಮತ್ತು ಮಂಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : hairamanagara.news@gmail.com
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.
WhatsApp : 9880439669
Mail : hairamanagara.news@gmail.com