ಕರಿಯಪ್ಪನ ಸಾವಿಗೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಬೇಕು : ಕೃಷ್ಣಮೂರ್ತಿ ಇರುಳಿಗ

ರಾಮನಗರ : ಮೈಸೂರು ಜಿಲ್ಲೆ ಹೆಗ್ಗಡೆ ದೇವನ ಕೋಟೆ ತಾಲೂಕಿನ ಜೇನು ಕುರುಬ ಸಮುದಾಯದ ಕರಿಯಪ್ಪ ನನ್ನು ಜಿಂಕೆ ಮಾಂಸ ದ ಕೇಸಿನಲ್ಲಿ ವಿಚಾರಣೆ ನಡೆಸುವ ನೆಪದಲ್ಲಿ ಅಮಾನುಷವಾಗಿ ಹೊಡೆದು ಸಾಯಿಸಿದ ಪ್ರಕರಣದಲ್ಲಿ ಸತ್ಯ ಸತ್ಯತೆ ಕಂಡುಹಿಡಿಯಲು ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯ ಮೂಲ ಆದಿವಾಸಿ ವೇದಿಕೆ ರಾಜ್ಯ ಖಜಾಂಚಿ ಕೃಷ್ಣಮೂರ್ತಿ ಇರುಳಿಗ ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಅರಣ್ಯಾಧಿಕಾರಿಗಳು ಆದಿವಾಸಿಗಳನ್ನು ಅಮಾನವೀಯವಾಗಿ ನಡೆಸಿ ಕೊಳ್ಳುತಿದ್ದು ಉದ್ದೇಶಪೂರ್ವಕವಾಗಿ ಕೇಸುಗಳನ್ನು ಹಾಕಿ ಬಂದಿಸಿ ಹಲ್ಲೆ ನಡೆಸಿ ಕೊಂದು ಹಾಕುವ ಅತಿರೇಕದ ನಡುವಳಿಕೆ ಯನ್ನ ಪ್ರದರ್ಶಿಸುತ್ತಿರುವ ಅಧಿಕಾರಿಗಳ ಮನ ಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ರಾಮನಗರದ ಬನ್ನೇರುಘಟ್ಟ ಅರಣ್ಯದಲ್ಲಿ ಆದಿವಾಸಿಗಳ ಮೇಲೆ ಹಲ್ಲೆ,ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾಣಿ ಗೇಟ್ ಜೇನುಕುರುಬ ಸಮುದಾಯದ ಬಸವನ ಮೇಲೆ ಗುಂಡು ಹಾರಿಸಿದ ಪ್ರಕರಣ,ಮಂಗಳೂರಿನಲ್ಲಿ ಕೊರಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣ ಉದಾಹರಣೆ ಯಷ್ಟೇ,ಆದಿವಾಸಿಗಳ ಹಕ್ಕುಗಳು ಸರಕಾರಿ ಯಂತ್ರದಿಂದ ಎಗ್ಗಿಲ್ಲದೆ ದಮನ ವಾಗುತಿದ್ದು, ರಕ್ಷಣೆಯೇ ಇಲ್ಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಿಯಪ್ಪ ಸಾವಿಗೆ ಕಾರಣರಾದ ಅರಣ್ಯ ಅಧಿಕಾರಿಗಳನ್ನು ತಕ್ಷಣ ಕೆಲಸದಿಂದ ವಜಾ ಮಾಡಬೇಕು ಹಾಗೂ ಕರಿಯಪ್ಪ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : hairamanagara.news@gmail.com

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.

WhatsApp : 9880439669

Mail : hairamanagara.news@gmail.com

Leave a Reply

Your email address will not be published. Required fields are marked *