ನರೇಗಾ ಯೋಜನೆಯಲ್ಲಿ ನಿಗದಿ ಪಡಿಸಿರುವ ಮಾನವ ದಿನಗಳ ಗುರಿ ಸಾಧಿಸಿ : ದಿಗ್ವಿಜಯ್ ಬೋಡ್ಕೆ
ಕನಕಪುರ : ನರೇಗಾ ಯೋಜನೆಯಡಿ ನಿಗದಿ ಪಡಿಸಿರುವ ಮಾನವ ದಿನಗಳ ಗುರಿ ಸಾಧಿಸಿ, ನಮ್ಮ ಹೊಲ ನಮ್ಮ ದಾರಿಗೆ ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು ವೈಯಕ್ತಿಕ ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಮುದಾಯ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳು, ಕೈತೋಟ, ಮಾನವದಿನಗಳ ಸೃಜನೆ ಸಂಬಂಧ ಅಧಿಕಾರಿಗಳಿಗೆ ಇಂತಿಷ್ಟು ಗುರಿ ನೀಡಿ, ಮುಂದಿನ ಸಭೆ ಹೊತ್ತಿಗೆ ಪ್ರಗತಿ ಸಾಧಿಸಲು ಹೇಳಿದರು.
ಜೊತೆಗೆ ಕನಕಪುರ ತಾಲೂಕಿನಲ್ಲಿ ಸಮುದಾಯ ಶೌಚಾಲಯ ಕಾಮಗಾರಿ ಹಾಗೂ ಅನುಷ್ಟಾನ ಇಲಾಖೆಗಳ ಕಾಮಗಾರಿಗಳನ್ನು ಪ್ರಾರಂಭಿಸಿ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ 20 ರಿಂದ 25 ಜನರನ್ನು ಸೇರಿಸಿ ಸಭೆ ನಡೆಸಿ ಎನ್.ಎಲ್.ಆರ್.ಎಂ (ಸಂಜೀವಿನಿ) ಯೋಜನೆ ಜಾರಿ ಮಾಡಲು ಕ್ರಮವಹಿಸಿ, ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ಈ ಯೋಜನೆಯನ್ನು ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮುದಾಯ ಶೌಚಾಲಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ಪಡೆದು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಧು, ಸಹಾಯಕ ನಿರ್ದೇಶಕರು (ಗ್ರಾ.ಉ), ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಎನ್.ಎಲ್.ಆರ್.ಎಂ (ಸಂಜೀವಿನಿ) ವಿಭಾಗದ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : hairamanagara.news@gmail.com
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.
WhatsApp : 9880439669
Mail : hairamanagara.news@gmail.com