ಮಾಗಡಿ : ಒಂಟಿ ಸಲಗ ದಾಂಗುಡಿ ; ಆತಂಕದಲ್ಲಿ ನಾಗರಿಕರು

ಮಾಗಡಿ : ತಾಲೂಕಿಗೆ ಒಂಟಿ ಸಲಗ ದಾಂಗುಡಿ ಇಟ್ಟಿರುವುದರಿಂದ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ತಾಲೂಕಿಗೆ ಹಾರೋಹಳ್ಳಿ  ಕಡೆಯಿಂದ ಬಂದ ಒಂಟಿ ಸಲಗ ಆನೆ ತಿಪ್ಪಗೊಂಡನಹಳ್ಳಿ, ಸಾವನದುರ್ಗ, ಗುಡೇಮಾರನಹಳ್ಳಿ  ಮಲ್ಲಿಗುಂಟೆ, ಕನ್ನಸಂದ್ರ,  ಸೊಪ್ಪಿನ ಬೆಟ್ಟದಲ್ಲಿ ಅಡ್ಡಾದಿಡ್ಡಿ ಕಾಡಾನೆ ಓಡಾಟ ನಡೆಸುತ್ತಿದ್ದು ಈ ಮಾರ್ಗದಲ್ಲಿನ ಹೊಲ, ತೋಟಗಳಲ್ಲಿ ಬೆಳೆದ ರಾಗಿ, ಭತ್ತ, ಅಡಿಕೆಮರ, ತೆಂಗಿನ ಮರ, ಮಾವಿನ ಮರಗಳು, ಬಾಳೆ  ಸೇರಿದಂತೆ ಇತರೆ ಗಿಡಗಳನ್ನು ನಾಶಮಾಡಿದೆ.

ಕಾಡಾನೆಯನ್ನು ಬೇರೆಡೆ ಓಡಿಸಲು ಅರಣ್ಯಾಧಿಕಾರಿ ಜಗದೀಶ್ ಗೌಡ, ನಾಲ್ಕು ತಂಡಗಳನ್ನು ರಚಿಸಿ ಪಟಾಕಿ ಸಿಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಡಾನೆಯನ್ನು ಬೇರೆಡೆ ಕಳುಹಿಸಲು ರಾತ್ರಿ, ಹಗಲು ಎನ್ನದೆ ಹರಸಾಹಸ ನಡೆಸುತ್ತಿದ್ದಾರೆ. ಕಾಡಾನೆ ಬರುತ್ತಿರುವ ಮಾರ್ಗಗಳ ಗ್ರಾಮಗಳಲ್ಲಿನ  ಸಾರ್ವನಿಕರು, ರೈತರು ಮನೆಯಿಂದ ಹೊರಗಡೆ ಬಾರದಂತೆ  ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ಈ ಬಾರಿ ಹೆಚ್ಚು ಮಳೆಬಿದ್ದಿರುವುದರಿಂದ ಕಾಡು ಮತ್ತು ಗುಡ್ಡ, ಬೆಟ್ಟಗಳಲ್ಲಿ  ಕಾಡು ಪ್ರಾಣಿಗಳಿಗೆ ಸಾಕಷ್ಟು ಆಹಾರ ಇರುವ ಕಾರಣ ಇದನ್ನು ಅರಸಿ ಕಾಡಾನೆ ಬಂದಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಆಗಲಕೋಟೆ ಸುತ್ತಮುತ್ತಲ ಗ್ರಾಮಗಳ ಬಳಿ ಕಾಡಾನೆ ದಿಡೀರನೆ ಪ್ರತ್ಯಕ್ಷವಾದ ಕಾರಣ ಆನೆಗೆ ಸಿಲುಕಿ ಒರ್ವ ಸಾವನಪ್ಪಿದ್ದು ಈ ಭಾರಿ ಇಂಥಹ ದುರ್ಘಟನೆ ನಡೆಯದಂತೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ.

ಶಿವಗಂಗೆ ಮೂಲಕ ಬನ್ನರುಘಟ್ಟ ಕಡೆಗೆ  ಒಂಟಿ ಸಲಗವನ್ನು ಓಡಿಸಲು   20 ಮಂದಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು  ಕಳೆದ ರಾತ್ರಿ  ಹಾರೋಹಳ್ಳಿ, ವಡರ್  ಲಾ ಮೂಲದಿಂದ ತಾಲೂಕಿಗೆ ಬಂದಿದೆ. ಇದರೊಂದಿಗೆ  ಇನ್ನೊಂದು  ಆನೆ ಕನಕಪುರ ಕಡೆ ಇದ್ದು ಆ ಜೋಡಿಗೆ ಈ ಆನೆ ಸೇರಲಿದೆ. ಯಾರಿಗೂ ತೊಂದರೆಯಾಗದಂತೆ ಮುಜÁಗೃತ ಕ್ರಮವಹಿಸಲಾಗಿದೆ.

 – ಜಗದೀಶ್  ಗೌಡ, ಅರಣ್ಯಾಧಿಕಾರಿ, ಮಾಗಡಿ.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : hairamanagara.news@gmail.com

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.

WhatsApp : 9880439669

Mail : hairamanagara.news@gmail.com

Leave a Reply

Your email address will not be published. Required fields are marked *