ಶೀತದಿಂದ ಹಠಾತ್ ಹೃದಯಾಘಾತ ಸಂಭವವು 50% ಅಧಿಕವಾಗಿದೆ ; ಶೀತದಿಂದ ಸಾವು ಕೂಡ ಸಂಭವಿಸುತ್ತದೆ

ಹವಮಾನ ಬದಲಾವಣೆಯಂತೂ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಅದರಲ್ಲೂ ನವೆಂಬರ್- ಡಿಸೆಂಬರ್ ತಿಂಗಳು ಬಂತೆಂದರೆ ಸಾಕು. ಕೊರೆಯುವ ಚಳಿಯಲ್ಲಿ ನಾವು ಮುದುಡಿ ಹೋಗುತ್ತೇವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಳಿಯನ್ನು ಶಪಿಸುವವರೇ ಹೆಚ್ಚು. ಚಳಿ ಆದಾಗ ಶೀತ ಆಗುವುದಂತು ಸಾಮಾನ್ಯ. ಅದರ ಜೊತೆ ಒಂದಿಷ್ಟು ಕಾಯಿಲೆಗಳು ಸೇರಿಕೊಂಡು ಬಿಡುತ್ತದೆ. ಆರೋಗ್ಯದಲ್ಲಿ ಏರು-ಪೇರು ಆಗುವುದಂತು ಇದ್ದೇ ಇದೆ. ಆದರೆ ಶೀತದಿಂದ ಹಠಾತ್ ಹೃದಯಾಘಾತ ಸಂಭವವು 50% ಅಧಿಕವಾಗಿದೆಯಂತೆ. ಶೀತದಿಂದ ಸಾವು ಕೂಡ ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಶೀತದ ತೀವ್ರತೆ ಹೆಚ್ಚಾದಾಗ ರಕ್ತ ದಪ್ಪವಾಗುತ್ತದೆ. ಉಸಿರಾಟ ನಾಳಗಳು ಕುಗ್ಗಿದಂತೆ ಹೃದಯದಲ್ಲಿ ರಕ್ತನಾಳಗಳು ಕುಗ್ಗುತ್ತವೆ ಮತ್ತು ರಕ್ತದೊತ್ತಡ ಬದಲಾಗುತ್ತದೆ. ರಕ್ತದಲ್ಲಿ ಕ್ಯಾಟೆಕಲೋಮಿನ್ಸ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ. ಹೀಗಾಗಿ ರಕ್ತ ಪೂರೈಕೆಯ ನಿಮಿತ್ತ ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ.ಜೊತೆಗೆ ಈಗಾಗಲೇ ಹೃದಯದ ರಕ್ತನಾಳಗಳಲ್ಲಿ ಪ್ಲೇಕ್‌ಗಳಿದ್ದರೆ, ಆ ಪ್ಲೇಕ್‌ಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದ್ದು, ಹೃದಯಾಘಾತಕ್ಕೆ ಕಾರಣವಾಗುತ್ತದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೃದಯಾಘಾತದಿಂದ ಬಳಲುತ್ತಿದ್ದಲ್ಲಿ ತಂಬಾಕು ಸೇವನೆಯು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಕೆಲವರು ಶೀತವನ್ನು ನಿಭಾಯಿಸಲು ಅತಿಯಾಗಿ ಧೂಮಪಾನ, ಮದ್ಯಪಾನ ಮಾಡುತ್ತಾರೆ. ಹೃದಯ ಬಡಿತ ಮತ್ತು ಲಯವನ್ನು ನಿಯಂತ್ರಿಸುವ ನರಮಂಡಲದ ಮೇಲೆ ಪ್ರತಿಕೂಲ ಪರಿಣಾಮವಾಗಿ ಹೃದಯದ ಪ್ರತಿಕ್ರಿಯೆಗಳು ಲಯದಿಂದ ಹೊರಗಿರುತ್ತವೆ. ಕೆಲವೊಮ್ಮೆ ಎಷ್ಟೋ ಜನ ನಿದ್ದೆಯಲ್ಲೇ ಸಾಯುವುದುಂಟು. ಚಳಿಗಾಲದಲ್ಲಿ ಹಠಾತ್ ಸಾವುಗಳು ಯುವಜನರಿಗೆ ಹೋಲಿಸಿದರೆ ವಯಸ್ಸಾದವರಲ್ಲಿ ಹೆಚ್ಚು ಸಂಭವಿಸುತ್ತದೆ. ಮಹಿಳೆಯರಿಗಿಂತ ಪುರುಷರು ಹೆಚ್ಚು ಹೃದಯಾಘಾತದಿಂದಾಗಿ ಸಾವನ್ನಪ್ಪುತ್ತಾರೆ.ಇನ್ನೂ ಕೆಲವರಲ್ಲಿ ಹೊಗೆ ಮತ್ತು ವಾಯು ಮಾಲಿನ್ಯದಿಂದಾಗಿ ಎದೆಯಲ್ಲಿ ಸೋಂಕು ಉಲ್ಬಣಗೊಳ್ಳುತ್ತದೆ. ಅವರಿಗೆ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚು. ಇದಕ್ಕೆ ಪರಿಹಾರವಾಗಿ ಧೂಮಪಾನ ಮಧ್ಯಪಾನವನ್ನು ಅತಿಯಾಗಿ ಸೇವಿಸಬೇಡಿ. ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದರಿಂದ ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಿ. ಅಲ್ಲದೇ ಈ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಏರುಪೇರಾಗುತ್ತದೆ. ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ ಈಗಾಗಲೇ ಇರುವವರು ಡೋಸೇಜ್ ಏರುಪೇರುಗಳ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಚಳಿಗಾಲದಲ್ಲಿ ರಾತ್ರಿ ಪ್ರಯಾಣ ಮಾಡಬೇಡಿ. ಸಂಜೆ 7 ಗಂಟೆಯ ನಂತರ ತಣ್ಣನೆಯ ಆಹಾರ ಮತ್ತು ಐಸ್ ಕ್ರೀಮ್ ತೆಗೆದುಕೊಳ್ಳದಿರುವುದು ಉತ್ತಮ. ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಶೀತ ಇರುವವರಿಂದ ದೂರವಿರುವುದು ಉತ್ತಮ. ಈ ಅವಧಿಯಲ್ಲಿ ಸ್ನಾಯುಗಳು, ಮೂಳೆಗಳು ಮತ್ತು ಕೀಲುಗಳು ಗಟ್ಟಿಯಾಗುತ್ತವೆ. ಹಾಗಾಗಿ ಸ್ನಾಯು ಮತ್ತು ಕೀಲು ನೋವು ಈ ಸಮಯದಲ್ಲಿ ಹೆಚ್ಚು. ಜೊತೆಗೆ ದೀರ್ಘಕಾಲದ ಅಲರ್ಜಿಗಳು, ಅಸ್ತಮಾ ಮತ್ತು ಸೈನುಟಿಸ್ ಸಾಮಾನ್ಯವಾಗಿದೆ.

ರಕ್ತನಾಳಗಳು ಕೂಡ ಸಂಕುಚಿತಗೊಳ್ಳುವುದರಿಂದ ಹೃದಯ ಮತ್ತು ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ. ಒಂದೆಡೆ ಚಳಿಯಿಂದ ವ್ಯಾಯಾಮ ಕಡಿಮೆ ಮಾಡುವುದು. ಮತ್ತೊಂದೆಡೆ ಅತಿಯಾಗಿ ತಿನ್ನುವುದು. ಇದರಿಂದಾಗಿ ತೂಕ ಹೆಚ್ಚಾಗುವುದು. ಶೀತ ಹವಾಮಾನಕ್ಕಿಂತ ಇತರ ಅನುಕೂಲಕರ ಸಮಯದಲ್ಲಿ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮವನ್ನು ಬಿಟ್ಟುಬಿಡಬೇಡಿ.ಯಾರೆಲ್ಲಾ ಎಚ್ಚರದಿಂದಿರಬೇಕು?

ಈಗಾಗಲೇ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಅಧಿಕವಾಗಿರುವವರು, ಧೂಮಪಾನಿಗಳು

ದೈಹಿಕ ವ್ಯಾಯಾಮದಿಂದ ದೂರವಿರುವವರು* ಬೊಜ್ಜು ಇರುವವರು* ನಿರಂತರವಾಗಿ ಒತ್ತಡವನ್ನು ಎದುರಿಸುವವರು, ನಿದ್ರಾಹೀನತೆಯಿಂದ ಬಳಲುತ್ತಿರುವವರುರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ? ಎದೆಯ ಮೇಲ್ಭಾಗದಲ್ಲಿ ನೋವು ದವಡೆ ಎಳೆಯುವುದು, ಅತಿ ಹೆಚ್ಚು ಬೆವರುವುದು
ಉಸಿರಾಟಕ್ಕೆ ತೊಂದರೆ ಎದೆ ಭಾರವಾಗುವುದು
ಚಳಿಗಾಲದಲ್ಲಿ ಈ ರೋಗಲಕ್ಷಣಗಳು ಸಾಮಾನ್ಯವಾಗಿದ್ದರೂ ಸಹ, ಅಪಾಯಕಾರಿ ಪಟ್ಟಿಯಲ್ಲಿ ಬರುವವುಗಳು. ಹೀಗಾಗಿ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/GSaux9WeiVP6RPZDaCYWfR

Leave a Reply

Your email address will not be published. Required fields are marked *