ಕನಕಪುರ : ಪರಭಾರೆಗೊಂಡಿದ್ದ ಜಮೀನು ಮೂಲ ವಾರಸುದಾರರ ಸುಪರ್ದಿಗೆ
ಕನಕಪುರ : ಉಪವಿಭಾಗಾಧಿಕಾರಿಗಳು ನೀಡಿದ್ದ ಆದೇಶದ ಅನ್ವಯ ಪರಭಾರೆ ಗೊಂಡಿದ್ದ ಪರಿಶಿಷ್ಟ ಜಾತಿ ವ್ಯಕ್ತಿಗೆ ಸೇರಿದ್ದ ಜಮೀನನ್ನು ತಾಲೂಕು ತಹಸೀಲ್ದಾರ್ ರವರ ಸೂಚನೆಯಂತೆ ಪರಿಶಿಷ್ಟ ಜಾತಿಗಳ ಕಾಯ್ದೆ ಅನ್ವಯ ಕಂದಾಯ ಇಲಾಖೆ ಸಿಬ್ಬಂದಿಗಳು ಮೂಲ ವಾರಸುದಾರರ ಸುಪರ್ದಿಗೆ ಕೊಡಿಸಿದ್ದಾರೆ.
ತಾಲೂಕಿನ ಹಾರೋಹಳ್ಳಿ ಹೋಬಳಿಯ ಬೋಕಿಪುರ ಗ್ರಾಮದ ಸರ್ವೆ ನಂ 41/05 ರಲ್ಲಿ ಎರಡು (2) ಎಕರೆ ಜಮೀನನ್ನು ಅದೇ ಗ್ರಾಮದ ಸೊಂಟಭೋವಿ ಮಗ ಚಿಕ್ಕ ಮಾರ್ಗ ಭೋವಿಗೆ 1971-72 ರಲ್ಲಿ ರಾಜ್ಯ ಸರ್ಕಾರ ದಿಂದ ಮಂಜೂರು ಮಾಡಿ 15 ವರ್ಷಗಳ ಕಾಲ ಪರಭಾರೆ ಮಾಡದಂತೆ ನಿರ್ಬಂಧ ಹಾಕಿದ್ದರು.
ಆದರೂ ಸಹ ಚಿಕ್ಕ ಮಾರ್ಗಭೋವಿ ಮಗ ಹನುಮಂತಯ್ಯ 1974 ರಲ್ಲಿ ತಿಮ್ಮಪ್ಪ ಬಿನ್ ಗೋವಿಂದಯ್ಯ ಎಂಬುವರಿಗೆ ಜಮೀನು ಮಾರಾಟ ಮಾಡುವ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದರು. ಈ ಬಗ್ಗೆ ಚಿಕ್ಕ ಮಾರ್ಗಭೋವಿ ಮೊಮ್ಮಗ ತಮ್ಮಯ್ಯ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ ಮೂಲ ಖಾತೆದಾರರಿಗೆ ಪಹಣಿ ಮಾಡಿಕೊಡುವಂತೆ ರಾಮನಗರ ಉಪವಿಭಾಗಾ
ಧಿಕಾರಿಗಳು ಕನಕಪುರ ತಹಸೀಲ್ದಾರ್ ಗೆ ಆದೇಶಿಸಿದ್ದರು.
ತಹಸೀಲ್ದಾರ್ ರವರು ಪರೀಶೀಲನೆ ನಡೆಸಿ ಪರಭಾರೆಗೊಂಡಿರುವ ಜಮೀನನ್ನು ಮೂಲ ವಾರಸುದಾರರಿಗೆ ವಾಪಸ್ ಬಿಡಿಸಿ ಕೊಡಿಸುವಂತೆ ಹಾರೋಹಳ್ಳಿ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹಾರೋಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ನಟರಾಜ್ ರವರು ಕಂದಾಯ ಇಲಾಖೆ ಹಾಗೂ ತಮ್ಮ ಸಿಬ್ಬಂದಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಪರಭಾರೆಯಾಗಿದ್ದ ಜಮೀನನ್ನು ಮೂಲವಾರಸುದಾರರ ಸುಪರ್ದಿಗೆ ಬಿಡಿಸಿಕೊಟ್ಟರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :