ಕುಮಾರಸ್ವಾಮಿ ಜೆಡಿಎಸ್ ಮನೆ, ಬಿಜೆಪಿ ಮನೆ ಎಂದು ವಿಂಗಡಿಸಲು ಮುಂದಾಗಿದ್ದಾರೆ : ಸಿ.ಪಿ. ಯೋಗೇಶ್ವರ್ ಆರೋಪ
ರಾಮನಗರ : ಎಚ್ .ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಎಲ್ ಸಿ ಸಿ.ಪಿ ಯೋಗೇಶ್ವರ್, ಈ ಹಿಂದೆ ನಾನು ನೀರಾವರಿ ಮಾಡಲು ಮುಂದಾದಾಗಲೂ ನೆಗೆಟಿವ್ ಆಗಿ ಮಾತನಾಡಿದ್ದರು. ನಮ್ಮ ಕೆಲಸ ಯಶಸ್ವಿ ಆದ ಮೇಲೆ ಅದನ್ನು ನಾವೇ ಮಾಡಿದ್ದು ಎಂದರು. ಕುಮಾರಸ್ವಾಮಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ವಸತಿ ಯೋಜನೆ ವಿಚಾರದಲ್ಲೂಅದನ್ನೇ ಮಾಡುತ್ತಿದ್ದಾರೆ. ಬೇಕಿದ್ದರೆ 3 ಸಾವಿರ ಫಲಾನುಭವಿಗಳನ್ನು ಕುಮಾರಸ್ವಾಮಿ ಅವರೇ ಆಯ್ಕೆ ಮಾಡಲಿ ಎಂದು ತಿಳಿಸಿದ್ದಾರೆ. ನೆರೆಯಿಂದ ಚನ್ನಪಟ್ಟಣ ತಾಲೂಕಿನಲ್ಲಿ ಮನೆಗಳು ಹಾನಿಯಾದ ಹಿನ್ನೆಲೆಯಲ್ಲಿ ನನ್ನ ಮನವಿಗೆ ಸ್ಪಂದಿಸಿ ವಸತಿ ಸಚಿವ ಸೋಮಣ್ಣ 3 ಸಾವಿರ ಮನೆ ಮಂಜೂರು ಮಾಡಿದ್ದಾರೆ. ಇಲ್ಲಿ ಯಾರು ಮನೆ ತಂದರು ಎಂಬುದು ಮುಖ್ಯವಲ್ಲ, ಚನ್ನಪಟ್ಟಣ ತಾಲೂಕಿಗೆ ಸಿಕ್ಕಿದೆ ಎಂಬುದು ಮುಖ್ಯ. ಆದರೆ, ಕುಮಾರಸ್ವಾಮಿ ಅವರು ಜೆಡಿಎಸ್ ಮನೆ, ಬಿಜೆಪಿ ಮನೆ ಎಂದು ವಿಂಗಡಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :