ಮರಾಠಾ ಸಮುದಾಯ 2ಎ ಪಟ್ಟಿಗೆ : ಮುಖ್ಯಮಂತ್ರಿ
ಬೆಳಗಾವಿ : ಮರಾಠಾ ಸಮುದಾಯವನ್ನು ಪ್ರವರ್ಗ ‘3ಬಿ’ಯಿಂದ ‘2ಎ’ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಶಂಕರಪ್ಪ ಆಯೋಗ 2012ರಲ್ಲಿ ಶಿಫಾರಸು ಮಾಡಿದೆ. ಆದನ್ನು ಮರು ಶಿಫಾರಸು ಮಾಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿ, ಮಧ್ಯಂತರ ವರದಿ ಪಡೆದು ನ್ಯಾಯ ಒದಗಿಸಲು ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ ಮತ್ತು ಶ್ರೀನಿವಾಸ ಮಾನೆ ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಮುಖ್ಯಮಂತ್ರಿ, ಶಂಕರಪ್ಪ ಆಯೋಗ ವರದಿ ನೀಡುವ ಸಂದರ್ಭದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರಲಿಲ್ಲ. ಈಗ ಆಯೋಗದಿಂದ ವರದಿ ಪಡೆದು, ಈ ಬಗ್ಗೆ ವಿರೋಧ ಪಕ್ಷದವರ ಜೊತೆಗೂ ಚರ್ಚಿಸುತ್ತೇನೆ ಎಂದು ತಿಳಿಸಿದರು.
“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :
https://www.facebook.com/HaiRamanagara
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :