ಸಿ.ಪಿ. ಯೋಗೇಶ್ವರ್ ರೀತಿ ಗೋಲ್ಮಾಲ್ ರಾಜಕಾರಣ ಮಾಡುತ್ತಿಲ್ಲ : ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ವಸತಿಹೀನರಿಗೆ ಸೂರು ಕಲ್ಪಿಸುವಂತೆ ನಾನು 2019ರಲ್ಲೇ ವಸತಿ ಸಚಿವರಿಗೆ ಪತ್ರ ಬರೆದು 3,200 ಮನೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ ಕೊರೋನಾ ಕಾಲದಿಂದಾಗಿ ಅದು ವಿಳಂಬವಾಗಿತ್ತು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇದೀಗ ಸರ್ಕಾರ ಮನೆಗಳ ಮಂಜೂರಾತಿಗೆ ಆದೇಶ ನೀಡಿದೆ. ಅದನ್ನು ಸಿ.ಪಿ. ಯೋಗೇಶ್ವರ್ ಅವರು ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರದ ಪವರ್‌ಪುಲ್ ಮಂತ್ರಿ ಆಗಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರೀತಿ ಗೋಲ್‌ಮಾಲ್ ರಾಜಕಾರಣ ಮಾಡುತ್ತಿಲ್ಲ. ನಾವು ಅನ್ನದಾತರ ಸಮಸ್ಯೆ ಪರ ಯಾವ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದರು. ಈ ಹಿಂದೆ ಪತ್ರ ಬರೆದ ವೇಳೆ ಸರ್ಕಾರ ಮನ್ನಣೆ ನೀಡಿರಲಿಲ್ಲ. ಆದರೆ ನನ್ನ ಪತ್ರಕ್ಕೆ ಮನ್ನಣೆ ನೀಡಿದೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರದ ಪವರ್ ಲೀಡರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

“ಹಾಯ್ ರಾಮನಗರ” ಫೇಸ್‌ಬುಕ್ ಪುಟವನ್ನು ಫಾಲೋ ಮಾಡಿ :

https://www.facebook.com/HaiRamanagara

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/GSaux9WeiVP6RPZDaCYWfR

Leave a Reply

Your email address will not be published. Required fields are marked *