ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತ ; ಕಾಂಗ್ರೆಸ್ ನನ್ನ ರಕ್ತದಲ್ಲಿದೆ : ಎಚ್. ವಿಶ್ವನಾಥ್
ರಾಯಚೂರು : ಅನೇಕ ಜನರಿಗೆ ಇದು ತಿಳಿದಿಲ್ಲ. ನಾನು ಯಾವ ಪಕ್ಷದಲ್ಲಿಲ್ಲ. ಸ್ವತಂತ್ರ ವ್ಯಕ್ತಿ. ಪ್ರತಾಪಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೂ ವಿಜಯೇಂದ್ರ ಬಹಷ್ಟು ಶ್ರಮಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಮಂತ್ರಾಲಯ ಮಠಕ್ಕೆ ಭೇಟಿನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತ. ಕಾಂಗ್ರೆಸ್ ನನ್ನ ರಕ್ತದಲ್ಲಿದೆ. ನಾನು ಬಿಜೆಪಿ ವಿಧಾನ ಪರಿಷತ್ ಸದಸ್ಯನಲ್ಲ. ರಾಜ್ಯಪಾಲರು ಬಿಜೆಪಿಗೆ ನನ್ನ ರಾಜೀನಾಮೆ ಪಡೆದು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಬೆಳೆದವರಾಗಿದ್ದು, ಅಣ್ಣ–ತಮ್ಮಂದಿರ ಮಧ್ಯೆ ಮುನಿಸು ಸಹಜ. ರಾಜಕಾರಣ ಎನ್ನುವುದು ಒಂದು ಕುಟುಂಬದ ಜಗಳವಿದ್ದಂತೆ. ಕೋಲಾರದ ಜನರ ಪ್ರೀತಿ, ವಿಶ್ವಾಸದಿಂದಾಗಿ ಸಿದ್ದರಾಮಯ್ಯನವರು ಅಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರರ ತೀರ್ಮಾನವೇ ಅಂತಿಮ ಎಂದು ತಿಳಸಿದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :