ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ನೇಹ ಎಂ ಕೂರ್ಸೆ ಪ್ರಥಮ ಸ್ಥಾನ
ಬೆಂಗಳೂರು : ದೆಹಲಿಯ ಮೌಂಟ್ ಅಬು ಪಬ್ಲಿಕ್ ಶಾಲೆಯಲ್ಲಿ ಜನವರಿ 9 ರಿಂದ 11 ರ ವರೆಗೆ ನಡೆದ ಸಿಬಿಎಸ್ಇ ಶಾಲೆಗಳ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯ ಬಾಲಕಿಯರ 19 ವರ್ಷದೊಳಗಿನ ವಿಭಾಗದಲ್ಲಿ, ಮಾರತ್ತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ನೇಹ ಎಮ್ ಕೂರ್ಸೆ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕವನ್ನು ಗಳಿಸಿದ್ದಾಳೆ.
ಈ ಸ್ಪರ್ಧಾಕೂಟದಲ್ಲಿ ದೇಶದ ಒಟ್ಟು 118 ಸಿಬಿಎಸ್ಇ ಶಾಲೆಗಳಿಂದ 450ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಸಾಧನೆಗೈದ ನೇಹಾ ಕೂರ್ಸೆಯ ಸಾಧನೆಯನ್ನು ವಾಗ್ದೇವಿ ವಿಲಾಸ ಸಂಸ್ಥೆಯ ಅಧ್ಯಕ್ಷರಾದ ಕೆ ಹರೀಶ್ ಅವರು ಶ್ಲಾಘಿಸಿದ್ದಾರೆ. ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.
ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :