ಕುರುಬರಹಳ್ಳಿಯಲ್ಲಿ ಚಿರತೆ ದಾಳಿಗೆ ಕುರಿ ಮೇಕೆ ಬಲಿ
ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿಯ ಕುರುಬಹಳ್ಳಿ ಗ್ರಾಮದ ರೈತ ರಾಮೇಗೌಡ ಎಂಬುವವರ ಮನೆಯ ಪಕ್ಕದಲ್ಲಿದ್ದ ಕುರಿ ಕೊಪ್ಪಲಿನ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿದ್ದು ಚಿರತೆ ದಾಳಿಗೆ ಎರಡು ಕುರಿ ಒಂದು ಮೇಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೆರಡು ಕುರಿಗಳನ್ನು ಚಿರತೆ ಹೊತ್ತೊಯ್ದಿರುವ ಘಟನೆ ನಡೆದಿದೆ.

ಕುರಿ ಮೇಕೆ ಸಾಕಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ರೈತ ರಾಮೇಗೌಡ ಜೀವನ ನಿರ್ವಹಣೆಗೆಂದು ಸಾಕಣೆ ಮಾಡಿಕೊಂಡಿದ್ದ ಕುರಿ ಮೇಕೆಗಳನ್ನು ಕಳೆದುಕೊಂಡು ಕಂಗಲಾಗಿದ್ದಾನೆ.
ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು ಚಿರತೆ ದಾಳಿಯಿಂದ ಈ ಭಾಗದ ಗ್ರಾಮಗಳಲ್ಲಿ ಪ್ರತಿದಿನ ರೈತರ ಸಾಕು ಪ್ರಾಣಿಗಳು ಚಿರತೆ ದಾಳಿಗೆ ಬಲಿಯಾಗುತ್ತಿವೆ.
ಚಿರತೆ ದಾಳಿಯಿಂದ ಈ ಭಾಗದ ಗ್ರಾಮಸ್ಥರು ಭಯಬೀತರಾಗಿದ್ದು ಚಿರತೆ ದಾಳಿಯಿಂದ ಕುರಿ ಕಳೆದುಕೊಂಡಿರುವ ರೈತನಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅರಣ್ಯ ಇಲಾಖೆ ಈ ಕೂಡಲೇ ಚಿರತೆಗಳ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮಖಂಡ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :