ರಾಗಿ ಅವರ ಲೇಖನ : ಕಾಂತಾರಾದಂತೆ ದಂತಕಥೆಯಾದ “ಕಾಂತರಾಜಣ್ಣ”

ಈ ಬರಹ ಬಲು ಬೇಸರವಾದರೂ, ಬರಯಲೇ ಬೇಕು, ಕಾರಣ ಕರ್ಣನಂತ ಮನಸ್ಸಿನ ಒಂದು ವ್ಯಕ್ತಿತ್ವ ಸದ್ದಿಲ್ಲದೇ ನೆನಪಾಗಿ ಹೋಗಿದೆ, ಹೀಗೆ ಬರೆಯಲು ಕಾರಣ ಹಲವು –
ಒಂದು ರಾತ್ರಿ 11 ರ ಸುಮಾರಿಗೆ ನಮ್ಮ ತಾಯಿಯವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯೊಂದು ಕಾಣಿಸಿಕೊಂಡಾಗ ಧೈರ್ಯ ತುಂಬಿ , ನಮ್ಮ ತಂದೆಯವರೊಂದಿಗೆ ತಮ್ಮದೇ ಜೀಪಿನಲ್ಲಿ ಕರೆದೋಯ್ದು ಬಿ.ಜಿ.ಎಸ್ ಆಸ್ಫತ್ರೆಯಲ್ಲಿ ತೋರಿಸಿ ಮರಳಿ ಕರೆತಂದಿದ್ದ ಪುಣ್ಯಾತ್ಮ ಕಾಂತರಾಜಣ್ಣ ನವರು.
ನಾನು ಸಣ್ಣವನಿದ್ದಾಗ ಅವರ ಕುಟುಂಬಕ್ಕೆ ಸೇರಿದ “ಬೇಲದ ಹಣ್ಣಿನ ಮರ”ದಿಂದ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ನಡೆಯಲು ಹೊರಟಿದ್ದ ನನಗೆ ಎದುರು ಬರುತ್ತಿದ್ದವರನ್ನ ಕಂಡು ಭಯದಿಂದ ಹಣ್ಣನ್ನು ಅಲ್ಲೇ ಎಸೆದು, ನಿಧಾನವಾಗಿ ಅಲ್ಲಿಂದ ಹೋಗಲು ಅವಣಿಸುತ್ತಿದ್ದೆ ಆಗ ಆ ಧನಿ “ಬಾರೋ ಇಲ್ಲಿ” ಎಂದದ್ದು ಕೇಳಿ ಜೀವ ನಡುಗಿದಂತಾಯ್ತು, ಎಂದೂ ಇತ್ತ ಬರದಿದ್ದವನು ಆಕಸ್ಮಿಕವಾಗಿ ನನ್ನೆದುರು ಮರದಿಂದ ಬಿದ್ದುದ ಕಂಡು ಎತ್ತಿಕೊಳ್ಳಲು ಹೋಗಿ ಸಿಕ್ಕಿಬಿದ್ದೆನೇ ಎಂದು ಅತೀವ ಭಯದಿಂದ ಅವರೆದುರು ಬಂದೆ , ಮತ್ತೆ ಆ ಕಡೆಯಿಂದ “ಎತ್ತಿಕೊಂಡು ಬಾ ಹಣ್ಣು” ಎಂದಿತು. ನನಗೆ ನಿಶ್ಚಯವಾಗಿ ಶಿಕ್ಷೆಯಾಗಬಹುದು ಎಂದುಕೊಂಡೆ , ಮತ್ತೆ “ಯಾರೋ ನೀನು” ಎಂದಾಗ “ವೆಂಕಟಯ್ಯರಾ ಚಿನ್ನಗಿರಣ್ಣರಾ ಮಗ” ಎಂದದ್ದು ಕೇಳಿ , ನಕ್ಕು “ಬಾ ಇಲ್ಲಿ ಅಲ್ಲಿ ಅಲ್ಲಿ ನೆಲ್ಲಿಕಾಯಿ ಗಿಡ ಇದೆ ಎತ್ತುಕೋ , ತಗೊಂಡು ಹೋಗು ಮನೆಗೆ ” ಎಂದಿತು ಆ ಗಿಡದ ಜೊತೆ ಓಡಿದವನು ಮನೆಗೆ ಬಂದಾಗಲೇ ನಿಂತದ್ದು,
ಈಗಲೂ ನಲ್ಲಿಕಾಯಿ ಗಿಡ ನಮ್ಮ ಮನೆಯ ಬಳಿಯೇ ಇದೆ ಕೊಟ್ಟಂತ ಪುಣ್ಯಾತ್ಮ ಈಗಷ್ಟೇ ನೆನಪಾಗಿ ಹೋಗಿದ್ದಾರೆ.
ನಾನು ಬೆಂಗಳೂರಿನಲ್ಲಿ 3-4ವರ್ಷ ಅಕ್ಕ ನ ಮನೆಯಲ್ಲಿ ಹಾಗೂ ಸ್ನೇಹಿತರಾದ ಸುರೇಶ್, ಸಿದ್ಧರಾಜು ರೂಂ ನಲ್ಲಿ ಕೆಲ ಕಾಲ ಇದ್ದ ದಿನಗಳಲ್ಲಿ ನನ್ನ ಮೂಲ ಅಂಕಪಟ್ಟಿಗಳು ಕಳೆದಿದ್ದವು ಅದು ಅಕ್ಕನ ಮನೆಯಲ್ಲಿ ಎಂದು ತಿಳಿದಿದ್ದ ನಾನು ಗಾಬರಿಯಾಗಿ ಕಾಂತರಾಜಣ್ಣ ನವರ ಬಳಿಗೆ ಬಂದು ವಿಚಾರ ತಿಳಿಸಿದೆ ಅವರು ಮತ್ತಾರೋ ಸ್ನೇಹಿತರಿಗೆ ತಿಳಿಸಿ “ಇವನು ನಮ್ಮೂರವನು ತುಂಬಾ ಒಳ್ಳೆ ಹುಡುಗ” ಇವನಿಗೆ ಸಹಾಯ ಮಾಡಿ ಎಂದರು. ಅವರು ಮಾರ್ಕ್ಸ್ ಕಾರ್ಡ್ ದೊರಕಿಸುವ ಭರವಸೆ ನೀಡಿದರು. ಮತ್ತು ಎರೇಹಳ್ಳಿಯಲ್ಲಿರುವ ಹಾಸ್ಟೆಲ್ ಗೆ ವಾರ್ಡನ್ ಆಗಿ ಸೇರಿಸಿಕೊಳ್ಳುವುದಾಗಿ ಹೇಳಿದರು. (ಕಾರಣಾಂತರಗಳಿಂದ ನಾನು ಹಾಸ್ಟೆಲ್ ಗೆ ಹೋಗಲಾಗಲಿಲ್ಲ).
ಒಂದೊಮ್ಮೆ ಬಾಬು ಸರ್ ರವರು ಬಿ.ಜಿ.ಎಸ್ ಆಸ್ಪತ್ರೆಯ ಪಕ್ಕದ ಶಾಲೆಯೊಂದರಲ್ಲಿ , ಕಲ್ಲಪ್ಪ ಪೂಜೇರ್ ರವರ ತಂಡ ನಾಟ್ಯಯೋಗ ತಂಡದಿಂದ “ಮೃತ್ಯೋರ್ಮ ” ಎಂಬ ನಾಟಕ ಪ್ರದರ್ಶನ ಏರ್ಪಡಿಸಿದ್ದರು ಅಲ್ಲಿಗೆ ಕಾಂತರಾಜಣ್ಣ ನವರು ಅತಿಥಿ ಯಾಗಿ ಆಗಮಿಸಿ ಆ ನಾಟಕವನ್ನು ಪೂರ್ತಿಯಾಗಿ ನೋಡಿದರು ಆ ನಾಟಕದಲ್ಲಿ ಬರುವ ಇಬ್ಬರು ಪೋಲೀಸ್ ಪೇದೆಗಳ ದೇ ಮುಖ್ಯ ಪಾತ್ರ . ಆ ಪೈಕಿ ನಾನೂ ಒಬ್ಬ ಪೋಲೀಸ್ ಪೇದೆಯಾಗಿದ್ದೆ . ಅದನ್ನು ಕಂಡ ಅಣ್ಣನವರು ನನ್ನನ್ನು ಪ್ರೀತಿಯಿಂದ ಅಲ್ಲಿನ ಎಲ್ಲರಿಗೂ ಪರಿಚಯಿಸಿದರು. ತಾನೂ ಒಬ್ಬ ಕಲಾವಿದನಾಗಿದ್ದು ಇತರ ಕಲಾವಿದರ ಕಲೆಯನ್ನ ಪ್ರೀತಿಸುವ ಗುಣ ಅವರಲ್ಲಿತ್ತು. ನಾನು ಕಳೆದ ವರ್ಷದ ಮೇ 4ರಂದು ನಮ್ಮೂರಿನಲ್ಲಿ ನಾನು ಒಟದು ದಿನದ ನಾಟಕ ಪ್ರದರ್ಶನ ಏರ್ಪಡಿಸುವ ವೇಳೆ ಅಣ್ಣನವರಿಗೆ ಒಮ್ಮೆ ಮಾತನಾಡಲು , ” ಹೇ ದಾರಾಳವಾಗಿ ಏನೂ ಭಯಪಡಬೇಡ ಬರೋ ಕಲಾವಿದರನ್ನ ನಮ್ಮ ಕನಸು ಹೋಂ ಸ್ಟೇ ಗೆ ಕರೆದುಕೊಂಡು ಬಾ ಇಲ್ಲೆ ಉಳಕೋಳೋಕೆ ವ್ಯವಸ್ಥೆ ಮಾಡಿಸ್ತೀನಿ. ಆಮೇಲೆ ನನ್ನಿಂದ ಏನಾಗುತ್ತೋ ಅದು ಕೊಡ್ತೀನಿ ಅಂದು ಅದರಂತೆಯೇ ನಡೆದುಕೊಂಡರು. ಎಲ್ಲಾ ಕಲಾವಿದರನ್ನು ಮಕ್ಕಳಂತೆ ಕಂಡು ಪ್ರೀತಿಯಿಂದ ಮಾತನಾಡಿ ಕಳಿಸಿದುದು ಈಗಲೂ ಕಣ್ಣ ಮುಂದೆ ಹಾಗೇ ಇದೆ….

ಮತ್ತೆ ಹುಟ್ಟಿ ಬನ್ನಿ ಅಣ್ಣ….

ಗಿರೀಶ್ ಎಸ್ ಸಿ (ರಾಗಿ)

ಲೇಖನ : ಗಿರೀಶ ಎಸ್ ಸಿ (ರಾಗಿ)
ರಂಗಭೂಮಿ ಕಲಾವಿದರು
ಮೊ : 9945017517

ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *