ಬ್ರಹ್ಮ ಕುಮಾರಿಯರ ಆಧ್ಯಾತ್ಮಿಕ ವಿಶ್ವವಿದ್ಯಾಲಯದಿಂದ ಬೆಂಗಳೂರಿನ 150 ಕೇಂದ್ರಗಳಲ್ಲಿ “ಮಿಷನ್ ಮೆಡಿಟೇಷನ್”
ಬೆಂಗಳೂರು : ಬ್ರಹ್ಮಕುಮಾರೀಸ್ ವಲ್ರ್ಡ್ ಸ್ಪಿರಿಚುಯಲ್ ಯೂನಿವರ್ಸಿಟಿಯು ಬೆಂಗಳೂರಿನಲ್ಲಿ “ಮಿಷನ್ ಮೆಡಿಟೇಷನ್” ಪ್ರಕಟಿಸಿದ್ದು ಅದು ಜನವರಿ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಮುಂದಿನ ತಿಂಗಳುಗಳಲ್ಲಿ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ಸಮಾರೋಪಗೊಳ್ಳುತ್ತದೆ. ಇದು ದೇಶದಲ್ಲಿ ನಡೆಯಲಿರುವ ಅತ್ಯಂತ ದೊಡ್ಡ ಧ್ಯಾನದ ಕಾರ್ಯಕ್ರಮವಾಗಿದೆ. ಸೋದರಿ ಲೀಲಾ(ಬೆಂಗಳೂರು ವಲಯದ ಮುಖ್ಯಸ್ಥರು) ಅವರು, “ಈ ಅಭಿಯಾನದ ಮೂಲಕ ನಾವು ಜನರಿಗೆ `ಜಸ್ಟ್-ಎ-ಮಿನಿಟ್-ಮೆಡಿಟೇಷನ್’ ಎಂಬ ವಿಶಿಷ್ಟ ವಿಧಾನವನ್ನು ಬೋಧಿಸುವ ಗುರಿ ಹೊಂದಿದ್ದು ಅದು ಒತ್ತಡ ನಿವಾರಿಸುತ್ತದೆ, ದಕ್ಷತೆ ಸುಧಾರಿಸುತ್ತದೆ ಮತ್ತು ದೈನಂದಿನ ಕೆಲಸಗಳನ್ನು ನಿರ್ವಹಿಸಲು ಹೆಚ್ಚು ಗಮನ ನೀಡುವಂತೆ ಮಾಡುತ್ತದೆ” ಎಂದರು. ಬ್ರಹ್ಮ ಕುಮಾರೀಸ್ ವಲ್ರ್ಡ್ ಸ್ಪಿರಿಚುಯಲ್ ಯೂನಿವರ್ಸಿಟಿಯು ವಿಶ್ವದ ಅತ್ಯಂತ ದೊಡ್ಡ ಆಧ್ಯಾತ್ಮಿಕ ಚಳವಳಿಯಾಗಿದ್ದು 137 ದೇಶಗಳ ವ್ಯಾಪ್ತಿ ಹೊಂದಿದೆ ಮತ್ತು ರಾಜಯೋಗ ಧ್ಯಾನ ಬೋಧಿಸಲು ಖ್ಯಾತಿ ಪಡೆದಿದೆ.

ಕಳೆದ ಮೂರು ವರ್ಷಗಳಲ್ಲಿ ವಿಶ್ವವು ಎದುರಿಸಿಸ ಸಂಕಷ್ಟ ನೋಡಿದ ನಂತರ ಪ್ರತಿಯೊಬ್ಬ ಮನುಷ್ಯರೂ ಕೊಂಚ ಸಮಯ ತೆಗೆದುಕೊಳ್ಳಬೇಕು ಮತ್ತು ಆಂತರಿಕ ಶಾಂತಿ ಕಂಡುಕೊಳ್ಳಲು ಮತ್ತೆ ಅವರು ತಮ್ಮನ್ನು ಮರು ಆವಿಷ್ಕರಿಸಿಕೊಳ್ಳಬೇಕು ಎನ್ನುವುದು ಅನಿವಾರ್ಯವಾಗಿದೆ. ಇಂದಿನ ಭಾವನಾತ್ಮಕ ಮತ್ತು ಮಾನಸಿಕ ಒತ್ತಡ ಸಾಮಾನ್ಯವಾಗಿರುವ ಈ ಸಂಕಷ್ಟದ ದಿನಗಳಲ್ಲಿ ಈ ಸಂಸ್ಥೆಯು ಪ್ರತಿಯೊಬ್ಬರಿಗೂ ಈ ಧ್ಯಾನದ ಮೂಲಕ ಒಂದು ಬಗೆಯ ಪ್ರಾಯೋಗಿಕ ಉಪಶಮನ ನೀಡುವ ಭರವಸೆ ಹೊಂದಿದೆ. ನಿಮ್ಮ ಹಲ್ಲು ಉಜ್ಜುವಾಗ, ಪಾತ್ರೆಯಲ್ಲಿ ನೀರು ಕಾಯುವಾಗ, ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಾಗ, ಕಂಪ್ಯೂಟರ್ ಪ್ರಾರಂಭವಾಗಲು ಕಾಯುತ್ತಿರುವಾಗ ಈ ಜಸ್ಟ್-ಎ-ಮಿನಿಟ್ ತಂತ್ರವು ವ್ಯರ್ಥವಾದ ಸಮಯ’ವನ್ನು
ನನಗಾಗಿ ಸಮಯ’ ಎನ್ನುವಂತೆ ಮಾಡುವ ಮೂಲಕ ಅತ್ಯಂತ ಸರಳ ಕೆಲಸಗಳನ್ನೂ ಆನಂದ ತರುತ್ತದೆ.
“ಮಿಷನ್ ಮೆಡಿಟೇಷನ್” ಉದ್ದೇಶವು ಧ್ಯಾನವನ್ನು ಒಂದೇ ನಿಮಿಷ ಮಾಡುವ ಮೂಲಕ ಯಾರಿಗೇ ಆದರೂ ಎಲ್ಲಿಯೇ ಆದರೂ ಧ್ಯಾನ ಸುಲಭಗೊಳಿಸುವುದು. ಬ್ರಹ್ಮ ಕುಮಾರಿಯರ 150ಕ್ಕೂ ಹೆಚ್ಚು ಧ್ಯಾನ ಕೇಂದ್ರಗಳು ಬೆಂಗಳೂರಿನಾದ್ಯಂತ ವಿಸ್ತರಿಸಿದ್ದು ಅವು ಈ ಜೀವನ ಬದಲಿಸುವ ಉದ್ದೇಶದಲ್ಲಿ ಭಾಗವಹಿಸಲಿವೆ.
ಬೆಂಗಳೂರಿಗರು ಯಾವುದೇ ಹಣಕಾಸಿನ ಒತ್ತಡವಿಲ್ಲದೆ ಇದರ ಅನುಭವ ಪಡೆದುಕೊಳ್ಳಬಹುದು.
ಬೆಂಗಳೂರು ಕೇಂದ್ರದ ಸೋದರಿ ಲೀಲಾ ಅವರು, “ನಾನು ಪ್ರತಿ ಬೆಂಗಳೂರಿಗರಿಗೂ ಬಂದು ಈ ಚಳವಳಿಯಲ್ಲಿ ಭಾಗವಹಿಸಲು ಮತ್ತು ಧ್ಯಾನದ ಮೂಲಕ ಆಂತರಿಕ ಶಾಂತಿ ಹೊಂದಲು ಕೋರುತ್ತೇನೆ. ಸ್ವಯಂ ಅನ್ನು ಮರು ಅನ್ವೇಷಿಸಿಕೊಳ್ಳುವುದಕ್ಕಿಂತ ಉತ್ತಮ ವಿಧಾನ ಮತ್ತೊಂದಿಲ್ಲ” ಎನ್ನುತ್ತಾರೆ.
ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಮೌಂಟ್ ಅಬುವಿನಲ್ಲಿರುವ ಕೇಂದ್ರ ಕಛೇರಿಗೆ ಭೇಟಿ ನೀಡಿದ್ದರು ಮತ್ತು ರೈಸಿಂಗ್ ಇಂಡಿಯಾ ಥ್ರೂ ಸ್ಪಿರಿಚುಯಲ್ ಎಂಪವರ್‍ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಜನರನ್ನು ಧ್ಯಾನದತ್ತ ಸೆಳೆಯುತ್ತಿರುವುದಕ್ಕೆ ಮತ್ತು “ಸ್ವಚ್ಛ ಭಾರತ್” ಅಭಿಯಾನದ ಮೂಲಕ ಸ್ವಚ್ಛತೆಯನ್ನು ಪ್ರತಿಪಾದಿಸುತ್ತಿರುವುದಕ್ಕೆ ಬ್ರಹ್ಮ ಕುಮಾರಿಯರ ತಂಡವನ್ನು ಪ್ರಶಂಸೆ ಮಾಡಿದ್ದರು.
ನಿರಂತರ ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :