ಅರ್ಕಾವತಿ ನದಿಯಲ್ಲಿ ಅಪರೂಪದ ನೀರು ನಾಯಿಗಳ ಹಿಂಡು ಪ್ರತ್ಯಕ್ಷ ; ಅಪರೂಪದ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು
-ಎಸ್. ರುದ್ರೇಶ್ವರ
ರಾಮನಗರ : ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿಯ ಅರ್ಕಾವತಿ ಸೇತುವೆ ಬಳಿಯ ನೀರಿನಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ಗೊತ್ತಾಗಿದ್ದೇ ತಡ ನೀರು ನಾಯಿಗಳನ್ನು ನೋಡಲು ಸುತ್ತಮುತ್ತಲಿನ ಜನ ಕಿಕ್ಕಿರಿದು ಬರುತ್ತಲೇ ಇದ್ದಾರೆ. ರಾಮನಗರ ತಾಲ್ಲೂಕಿನಲ್ಲಿ ಈಗಾಗಲೇ ಮಳೆ ಹೆಚ್ಚಾಗಿ ಸುರಿದಿದ್ದು, ಇಲ್ಲಿನ ಕೆರೆ ಕಟ್ಟೆಗಳು, ಹಳ್ಳ -ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದೆ. ಹಚ್ಚ ಹಸಿರಾದ ವಾತಾವರಣವೂ ಇದೆ. ಹಾಗಾಗಿ ಸುಂದರ ತಾಣ ಹುಡಿಕಿಕೊಂಡು ನೀರು ನಾಯಿಗಳ ಹಿಂಡು ಇಲ್ಲಿಗೆ ಬಂದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಪ್ರಾಣಿಗಳು ನೋಡಲು ಸಿಗುವುದು ಅಪರೂಪವಾಗಿದೆ. ಏಕೆಂದರೆ ನೀರಿನಲ್ಲಿ ಕೆಲವೊಮ್ಮೆ ತಲೆಯೆತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ನೀರಿನಲ್ಲಿ ಚಲಿಸುತ್ತದೆ. ಕೆಲವೊಮ್ಮೆ ಮಾತ್ರ ಕೆರೆಯ ದಡದಲ್ಲಿ ಕಾಣುತ್ತಿವೆ. ಅಪರೂಪದ ಜೀವ ಪ್ರಬೇಧ ನೀರು ನಾಯಿಗಳ ಹಿಂಡು ನೀರಿನಲ್ಲಿ ಮುಳುಗೇಳುವುದನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಲೇ ಇದ್ದಾರೆ. ಅಲ್ಲದೇ ಈ ಪ್ರದೇಶ ಹೆಚ್ಚಾಗಿ ಬಯಲು ಸೀಮೆಯಿಂದ ಕೂಡಿದೆ. ಇಂತಹ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಸಿಗುವುದು ತುಂಬಾ ಕಡಿಮೆ. ಅರ್ಕಾವತಿ ನದಿಯಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ವೈಜ್ಞಾನಿಕ ನಾಮಧೇಯ ಯುರೇಷಿಯನ ಒಟ್ಟರ್ : ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಕಾಲು, ಸ್ವರ್ಶ ಸೂಕ್ಷ್ಮ ಮೀಸೆ ಇದರ ದೈಹಿಕ ವಿಶೇಷತೆ. ವೈಜ್ಞಾನಿಕ ನಾಮಧೇಯ ಯುರೇಷಿಯನ ಒಟ್ಟರ್. ಶುದ್ಧ ನೀರಿನಲ್ಲಿ ವಾಸಿಸುವ ನೀರುನಾಯಿ ಚಾಣಾಕ್ಷ ಮೀನು ಬೇಟೆಗಾರ. ಕೆರೆ, ಹಳ್ಳ–ಕೊಳ್ಳದಲ್ಲಿ ಹರಿವ ನೀರಿಗೆ ಹಿಮ್ಮುಖ ಚಲಿಸುವ ಮೀನುಗಳ ಹುಡುಕಾಟದಲ್ಲಿ ಅರ್ಕಾವತಿ ನದಿಯಲ್ಲಿ ಕಾಣಿಸಿರುವ ಸಾಧ್ಯತೆ ಹೆಚ್ಚಿದೆ.
ತಕ್ಷಣಕ್ಕೆ ಮುಂಗುಸಿಯ ಮುಖ ಹೋಲುವ ಇದು ವಿರಳ ಗೋಚರ ಜೀವಿ. ಶಬ್ದ, ಜನರಿಂದ ದೂರವಿರುವ ಅಂಜುಬುರುಕ. ಅಪರೂಪಕ್ಕೆ ಎದುರಾಗುವ ಜಲಚರ, ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟೆ ಆಡುವಲ್ಲಿ ನಿಷ್ಣಾತ.
ನೆಲದ ವಾಸ ಕಡಿಮೆ : ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿತ್ತು. ಭದ್ರಾ ಜಲಾಶಯದ ಹಿನ್ನೀರಿನ ಮೂಲಕ ಸೂಳೆಕೆರೆ ತಲುಪಿರುವ ಸಾಧ್ಯತೆ ಹೆಚ್ಚು. ಅಲ್ಲಿ ಇವುಗಳ ಸ್ವಾಭಾವಿಕ ನೆಲೆ ಇದೆ. ನೀರಿನಲ್ಲಿ ಬಲವಾದ ಬೇಟೆಗಾರ. ನೆಲದ ವಾಸ ಕಡಿಮೆ. ಮೀನಿನ ಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹಸಿವು ನೀಗಿಸುವ ಸ್ವಾಭಾವಿಕ ಆಯ್ಕೆಯಾಗಿದೆ.
ಅಪರೂಪದ ಪ್ರಾಣಿ : ಈ ಬಾರಿ ಮಳೆ ಹೆಚ್ಚಾಗಿ ಆಗಿರುವುದರಿಂದ ಹಳ್ಳ -ಕೊಳ್ಳ ತುಂಬಿ ಹರಿದಿದ್ದು, ಈ ನಾಯಿಗಳು ನದಿಯ ಮೂಲಕ ಬಂದು ಹಳ್ಳಕ್ಕೆ ಸೇರಿಕೊಂಡಿವೆ. ಬಳಿಕ ಅಲ್ಲಿಂದ ಇಲ್ಲಿಗೆ ಬಂದಿವೆ ಎನ್ನಲಾಗುತ್ತಿದೆ. ಇಂತಹ ಅಪರೂಪದ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :