ಇನ್ನೊಬ್ಬರನ್ನು ನೋಡಿ ಅಸೂಯೆಪಡುವ ಸ್ವಭಾವ ಬಿಡಬೇಕು : ಬಿ.ಕೆ. ದಿವ್ಯ

ರಾಮನಗರ : ಪ್ರಪಂಚದಲ್ಲಿರುವ ಜೀವಿಗಳಲ್ಲಿ ಮನುಷ್ಯನು ಅತ್ಯಂತ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇಂತಹ ಮನುಷ್ಯ ಜನ್ಮವನ್ನು ಪ್ರತಿಯೊಬ್ಬರೂ ಸಾರ್ಥಕಪಡಿಸಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ರಾಮನಗರ ಶಾಖೆಯ ಸಂಚಾಲಕಿ ಬಿ.ಕೆ. ದಿವ್ಯ ತಿಳಿಸಿದರು.


ನಗರದ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ರಾಮನಗರ ಸೇವಾ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ಶಿವಧ್ವಜಾರೋಹಣ ಕಾರ್ಯಕ್ರಮ ಹಾಗೂ ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಲ್ಲಿ ನಂಬಿಕೆಯನ್ನಿಟ್ಟುಕೊಂಡಿರಬೇಕು. ಸತ್ಪುರುಷರ ಸಹವಾಸ ಮಾಡಬೇಕು. ತಂದೆ– ತಾಯಿ ಮತ್ತು ಗುರುಗಳನ್ನು ದೇವರಂತೆ ಕಾಣಬೇಕು. ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವರ್ತಿಸಬೇಕು. ಯಾರಿಗೂ ಯಾವತ್ತೂ ತೊಂದರೆ ಮಾಡಬಾರದು ಎಂದರು.
ಇನ್ನೊಬ್ಬರಿಗೆ ಸಾಧ್ಯವಾದಷ್ಟು ಉಪಕಾರವನ್ನು ಮಾಡಬೇಕು. ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರಬೇಕು. ಅತಿಯಾದ ಆಸೆಯನ್ನು ಬಿಟ್ಟು ದೇವರು ನಮಗೆ ಕೊಟ್ಟಿರುವ ಪದಾರ್ಥಗಳಿಂದ ತೃಪ್ತಿಪಡುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದರು.
ಇನ್ನೊಬ್ಬರನ್ನು ನೋಡಿ ಅಸೂಯೆಪಡುವ ಸ್ವಭಾವ ಬಿಡಬೇಕು. ನಮಗೆ ಸಿಕ್ಕಿರುವ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡೆ ಒಳ್ಳೆಯ ಕೆಲಸಗಳಿಗಾಗಿ ವಿನಿಯೋಗಿಸಬೇಕು. ನಾವು ಒಳ್ಳೆಯ ಮಾತ್ರದಲ್ಲಿರುವುದಲ್ಲದೆ ನಮ್ಮ ಮಕ್ಕಳಿಗೂ ಒಳ್ಳೆಯ ಮಾರ್ಗವನ್ನು ತೋರಿಸಬೇಕು. ಈ ರೀತಿಯಾಗಿ ನಡೆದುಕೊಂಡಾಗ ಮಾತ್ರವೇ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಕೆ.ಪಿ. ಹೆಗ್ಡೆ, ಹಿರಿಯ ವಕೀಲ ಕೆಂಪಯ್ಯ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟಾಚಲಯ್ಯ, ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರ, ಕುಮಾರಿಯರು ಉಪಸ್ಥಿತರಿದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *