ದೊಡ್ಡಗಂಗವಾಡಿ : ಮಾವಿನ ಮರಗಳಿಗೆ ಬೆಂಕಿ
ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದ ಜಿ.ಉಮಾಮಹೇಶ್ವರಿ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಮಾವಿನ ತೋಟಕ್ಕೆ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬೆಂಕಿ ಇಟ್ಟಿದ್ದು, ಹಲವು ಮರಗಳು ಸುಟ್ಟು ಹೋಗಿವೆ. ಹತ್ತಾರು ವರ್ಷ ಕಷ್ಟಪಟ್ಟು ಬೆಳೆಸಿದ ಮಾವಿನ ಮರಗಳಿಗೆ ಕಿಡಿಗೇಡಿಗಳು ಇಟ್ಟ ಬೆಂಕಿ ಇಟ್ಟ ಪರಿಣಾಮ ಫಸಲು ಕಚ್ಚಿದ ಹಲವು ಮಾವಿನ ಮರಗಳು ಹಾನಿಗೊಳಗಾಗಿವೆ. ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಉಮಾಮಹೇಶ್ವರಿ ಮನವಿ ಮಾಡಿದ್ದಾರೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :