ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಹರೀಶ್ ಕುಮಾರ್
ರಾಮನಗರ : ಕಾನೂನುಗಳು ನಮ್ಮ ರಕ್ಷ ಣೆಗಾಗಿಯೇ ಇರುವುದರಿಂದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ವಕೀಲ ಹರೀಶ್ ಕುಮಾರ್ ಸುಗ್ಗನಹಳ್ಳಿ ತಿಳಿಸಿದರು.
ಇಲ್ಲಿನ ಬಸವನಪುರದಲ್ಲಿ ಶಾಂತಿನಿಕೇತನ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಅವರು “ಕಾನೂನು ಅರಿವು” ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನು ಮಾಹಿತಿ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ. ಆದರೂ ಕನಿಷ್ಠ ಪ್ರತಿ ದಿನಕ್ಕೆ ಅನಿವಾರ್ಯವಾಗಿರುವ ವಿಷಯ ತಿಳಿದಿರಬೇಕಾಗಿರುವುದು ಅವಶ್ಯಕ ಎಂದರು.
ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗಳಿಗೆ ಕ್ಷ ಮೆ ಇರುವುದಿಲ್ಲ. ವಾಹನ ಓಡಿಸುವ ವಿದ್ಯಾರ್ಥಿಗಳು ಪರವಾನಗಿ ಮತ್ತು ಜೀವವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಚಾಲನಾ ಪರವಾನಗಿ ಹಾಗೂ ಮತದಾನದ ಹಕ್ಕು ಪಡೆಯಲು ಅರ್ಹತೆ ಹೊಂದಿರುತ್ತಾರೆ. ಸರಕಾರ ನಿಗದಿಪಡಿಸಿದಂತೆ ಸೂಕ್ತ ದಾಖಲೆ ನೀಡಿ ಎರಡು ಹಕ್ಕುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಯುವ ಜನಾಂಗ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಶಿಕ್ಷಣ ಉದ್ಯೋಗ ನೀಡುತ್ತದೆ. ನಮಗಾಗಿ, ಸಮಾಜಕ್ಕಾಗಿ, ದೇಶಕ್ಕಾಗಿ ದುಡಿಯುವ ಛಲವಿದ್ದರೆ ಮಾತ್ರ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ಕಾಣಬಹುದು. ದೇಶದ ನಾಗರಿಕರಾದ ನಮಗೆ ದೇಶದ ಅಭಿವೃದ್ಧಿ ಬಗ್ಗೆ ನಮ್ಮದೇ ಆದಂತಹ ಜವಾಬ್ದಾರಿ ಇರುತ್ತದೆ. ಅದನ್ನು ನಿರ್ವಹಿಸಿದರೆ ಉತ್ತಮ ಸತ್ಪ್ರಜೆ ಎಂಬ ಹೆಗ್ಗಳಿಕೆಗೆ ವಿದ್ಯಾರ್ಥಿಗಳು ಪಾತ್ರರಾಗುತ್ತಾರೆ ಎಂದು ತಿಳಿಸಿದರು.

ದೇಶದ ಕಾನೂನಿಗೆ ಗೌರವ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಾನೂನನ್ನು ಪಾಲಿಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ; ಸಣ್ಣವರಲ್ಲ. ಎಲ್ಲರಿಗೂ ಸಮಾನವಾದ ಹಕ್ಕಿದೆ. ಎಲ್ಲರೂ ಕಾನೂನು ಪ್ರಕಾರ ನಡೆದರೆ ತಂಟೆ–ತಕರಾರುಗಳು ಇರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಮುಖಂಡ ಬಿ.ಎಸ್. ಸಿದ್ದೇಗೌಡ, ಬಿ.ಸಿ. ಶೇಖರ್, ಸಿದ್ದರಾಮು, ಶ್ರೀಕಂಠ, ಶಾಂತಿನಿಕೇತನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಕುಸುಮ, ಸಹಾಯಕ ಪ್ರಾಧ್ಯಾಪಕರಾದ ಎಂ. ಮುನಿರಾಜು, ಕೆ.ಎಸ್. ನಂದನ್ ಕುಮಾರ್ ಇತರರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :