ಎಬಿಸಿಡಿ ನೃತ್ಯ ಶಾಲೆಗೆ ಅತ್ಯುತ್ತಮ ನೃತ್ಯಶಾಲೆ ಪ್ರಶಸ್ತಿ
ರಾಮನಗರ: ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘ (ರಿ) ವತಿಯಿಂದ ಬೆಂಗಳೂರಿನ ಸ್ಟಾರ್ ಕನ್ವೆನ್ಷನ್‍ಹಾಲ್‍ನಲ್ಲಿ ಕರ್ನಾಟಕ ಡ್ಯಾನ್ಸ್ ಹಬ್ಬ ಸಾಂಸ್ಕೃತಿಕ ನೃತ್ಯಸ್ಪರ್ಧೆಯಲ್ಲಿ ರಾಮನಗರ ಎಬಿಸಿಡಿ ನೃತ್ಯ ಶಾಲೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಭರತನಾಟ್ಯ, ಜಾನಪದ ನೃತ್ಯ, ವೆಸ್ಟರ್ನ್ ಡಾನ್ಸ್ ನೃತ್ಯಗಳ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಅತ್ಯುತ್ತಮ ನೃತ್ಯ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಆಲ್ ಓಕೆ ಚಲನಚಿತ್ರದ ನಿರ್ದೇಶಕ ಸಂಜಯ್ ಮಾತನಾಡಿ ಕನ್ನಡ ಹೊಸ ಚಲನಚಿತ್ರ ಉಪೇಂದ್ರ ಮತ್ತು ಸುದೀಪ್ ಅಭಿನಯದ ಕಬ್ಜಾ ಚಿತ್ರ ಮತ್ತು ಗದಾಯುದ್ಧ ಚಿತ್ರದ ಟೀಸರ್ ಬಿಡುಗಡೆ ಈ ನೃತ್ಯ ದೇಗುಲ ನೃತ್ಯ ಕಲಾವಿದರ ಪುಟಾಣಿ ಮಕ್ಕಳ ಸಮ್ಮುಖದಲ್ಲಿ ನೆರೆವೇರಿಸಿರುವುದು ನಿಜಕ್ಕೂ ಹೊಸ ಅಧ್ಯಾಯ, ಪ್ರತಿಯೊಂದು ಚಲನಚಿತ್ರಗಳಲ್ಲಿ ಅತಿ ಮುಖ್ಯವಾದದ್ದು ನಾಯಕ-ನಾಯಕಿಯರ ನೃತ್ಯವೇ ಕೇಂದ್ರಬಿಂದುವಾಗಿರುತ್ತದೆ. ಇಂತಹ ನೃತ್ಯಗಳನ್ನು ಕಲಿತು ಪ್ರದರ್ಶನ ನೀಡಿದ ಪುಟಾಣಿ ಮಕ್ಕಳಲ್ಲಿನ ಕಲೆ ನಿಜಕ್ಕೂ ಮೆಚ್ಚುವಂತದ್ದು, ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆಗಳು ಎಂದರು.
ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘ ರಿ, ಸಂಸ್ಥಾಪಕ ಡಾ. ದಿನಕರ್ ಮಾತನಾಡಿ ಹತ್ತು ವರ್ಷಗಳ ಕನಸು ಈ ಸಂಘ ಪರಿವಾರ ಕಟ್ಟಲು ಸಾಧ್ಯ ಆಗಿದೆ ಇಂದು ಒಂದೇ ವೇದಿಕೆಯಲ್ಲಿ ಈ ನೃತ್ಯ ಹಬ್ಬ ನೋಡಲು ಎರಡು ಕಣ್ಣು ಸಾಲದು.. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ನೀಡಲು ನಮ್ಮ ಈ ಸಂಸ್ಥೆ ಹಾಗೂ ನಮ್ಮ ಎಲ್ಲಾ ಕಲಾವಿದರು ಶ್ರಮಿಸುತ್ತಿದ್ದಾರೆ. ಜಿಲ್ಲಾ ಸಂಘಗಳ ಶ್ರೇಯೋಭಿವೃದ್ದಿ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಸಂಘವನ್ನು ಸಧೃಡವಾಗಿ ಬೆಳಸಲಾಗುತ್ತಿದೆ ಎಂದರು.
ರಾಮನಗರದ ರೇಣುಕಪ್ರಸಾದ್ ನೇತೃತ್ವದ ಎಬಿಸಿಡಿ ನೃತ್ಯ ಶಾಲೆ ನಿಜಕ್ಕೂ ನಾವೆಲ್ಲರೂ ಆಶ್ಚರ್ಯಗೊಳ್ಳುವ ಸಂಗತಿ ಕಳೆದ ವರ್ಷದಲ್ಲಿ ದೆಹಲಿಯಲ್ಲಿ ಪೆರೇಡ್‍ನಲ್ಲಿ ಪಾಲ್ಗೊಂಡಂತಹ ಕರ್ನಾಟಕದ ಟಾಬ್ಲೆಟ್ ಜೊತೆ ನೃತ್ಯ ಮಾಡಿದಂತ ರೇಣುಕಪ್ರಸಾದ್ ಇದೇ ವರ್ಷ 2023 ದುಬೈನಲ್ಲಿ ನಮ್ಮ ಕನ್ನಡ ಬಾವುಟ ಹಾರಿಸಿ ನೃತ್ಯ ಪ್ರದರ್ಶನ ಮಾಡಿ ಬಹುಮಾನ ಪಡೆದ ಶಾಲೆ ಹಾಗೂ ಕಳೆದ ಸಾಲಿನಲ್ಲಿ ಸುಮಾರು 300ಕ್ಕೂ ಹೆಚ್ಚು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ ಕರ್ನಾಟಕದ ಏಕೈಕ ನೃತ್ಯ ಶಾಲೆ ರಾಮನಗರ ಎಬಿಸಿಡಿ ನೃತ್ಯ ಶಾಲೆ ಎಂಬುದು ನಿಜಕ್ಕೂ ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘ (ರಿ) ಅಧ್ಯಕ್ಷ ಅವಿನಾಶ್ ಮಾತನಾಡಿ ಎಲ್ಲ ಜಿಲ್ಲೆಗಳ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಿಜಕ್ಕೂ ಕಣ್ಣಿಗೆ ಸಂಭ್ರಮವಾಗಿದೆ ನಮ್ಮ ಸೂಪರ್ ಕಿಡ್ಸ್ ಚಾನಲ್ ಮತ್ತು ವಾವ್ ಸಿನಿಮಾಸ್ ಅತಿ ಹೆಚ್ಚು ವಿದ್ಯಾರ್ಥಿಗಳ ನೋಂದಣಿ ಮಾಡಿಸಿದ ರಾಮನಗರದ ಎಬಿಸಿಡಿ ಪ್ರತಿ ಶಾಲೆ ವಿವಿಧ ಕಲೆಗಳ ಹೊಸ ಹೊಸ ನೃತ್ಯ ಪ್ರದರ್ಶನ ನೀಡುತ್ತಾ ಎಲ್ಲರ ಮನಸ್ಸು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಈ ನೃತ್ಯ ಹಬ್ಬ ಎಲ್ಲಾ ಜಿಲ್ಲೆಗಳಲ್ಲಿ ಮಾಡಲು ನಾವು ನಿರ್ಧರಿಸಿದ್ದೇವೆ ಪ್ರತಿಯೊಂದು ಗ್ರಾಮಾಂತರ ಮತ್ತು ನಗರಗಳಲ್ಲಿ ಹೊಸ ಪ್ರತಿಭೆಗಳನ್ನು ಹೊರ ತರಲು ನಾವೆಲ್ಲರೂ ಸಿದ್ಧರಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘದ ರಾಮನಗರ ಜಿಲ್ಲಾಧ್ಯಕ್ಷ ರೇಣುಕಾ ಪ್ರಸಾದ್, ಸೇರಿದಂತೆ ಪದಾಧಿಕಾರಿಗಳು, ಪ್ರಸಿದ್ಧ ನೃತ್ಯ ನಿರ್ದೇಶಕರು, ಕಿರುತೆರೆ ನಟ ನಟಿಯರು, ಕಾಮಿಡಿ ನಟರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :