ಪ್ರತಿಷ್ಠಿತ ಡಬ್ಲ್ಯೂಬಿಆರ್ ಗ್ರೂಪ್ ನಿಂದ ಅಮೃತ ವಿಕಲಚೇತನ ಟ್ರಸ್ಟ್ ಗೆ “ರಾಷ್ಟ್ರೀಯ ಸೇವಾ ಶ್ರೇಷ್ಠ ಪ್ರಶಸ್ತಿ”
ರಾಮನಗರ : ದೇಶದ ಪ್ರತಿಷ್ಠಿತ ಡಬ್ಲ್ಯೂಬಿಆರ್ ಗ್ರೂಪ್ ಸಂಸ್ಥೆಯು ಇತ್ತೀಚಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಮನಗರದ
ಅಮೃತ ವಿಕಲಚೇತನ ಟ್ರಸ್ಟ್ ಹಾಗೂ ಅಮೃತ ವೃದ್ಧಾಶ್ರಮ ಸಂಸ್ಥೆಯು ವಿಶೇಷಚೇತನರು ಹಾಗೂ ಹಿರಿಯ ಚೇತನರಿಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ “ರಾಷ್ಟ್ರೀಯ ಸೇವಾ ಶ್ರೇಷ್ಠ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.
ಬಾಲಿವುಡ್ ನಟಿ ಇಶಿತಾ ದತ್ತಾ ಅವರು ಅಮೃತ ವಿಕಲಚೇತನ ಟ್ರಸ್ಟ್ ಹಾಗೂ ಅಮೃತ ವೃದ್ಧಾಶ್ರಮ ಸಂಸ್ಥೆಯ ಕಾರ್ಯದರ್ಶಿ ಟಿ. ರಮೇಶ್ ಹಾಗೂ ಖಜಾಂಚಿ ಪಿ. ಸಪ್ನಾ ಅವರಿಗೆ ಪ್ರಶಸ್ತಿ ವಿತರಿಸಿದರು.

ಕರ್ನಾಟಕದಲ್ಲಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ಕೆಲಸ ಮಾಡುವ ಅತ್ಯಂತ ಭರವಸೆಯ ಸರ್ಕಾರೇತರ ಸಂಘ ಸಂಸ್ಥೆ- ಎನ್ ಜಿ ಒ ಎಂದು ವಿಶೇಷವಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಈ ಸಂಬಂಧ ಸಂತಸ ಹಂಚಿಕೊಂಡಿರುವ ಸಂಸ್ಥೆಯ ಕಾರ್ಯದರ್ಶಿ ಟಿ.ರಮೇಶ್ ಅವರು ನಮ್ಮ ಟ್ರಸ್ಟ್ ಮಾಡುತ್ತಿರುವ ಅಳಿಲು ಸೇವೆಯನ್ನು ನವದೆಹಲಿಯ ಪ್ರತಿಷ್ಠಿತ ಸಂಸ್ಥೆಯು
“ರಾಷ್ಟ್ರೀಯ ಸೇವಾ ಶ್ರೇಷ್ಠ” ಪ್ರಶಸ್ತಿಯನ್ನು ನೀಡಿರುವುದು ನಮ್ಮ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ನಿಭಾಯಿಸಲು ಸ್ಫೂರ್ತಿಯಾಗಿದೆ.
ಮುಂದಿನ ದಿನಗಳಲ್ಲಿ ರಾಮನಗರದ ಐಜೂರಿನಲ್ಲಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ “ಪಿಜಿಯೋಥೆರಪಿ ಕೇಂದ್ರ”ವನ್ನು ತೆರೆಯಲು ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :