ಲಂಚ ಕೇಳಿದ ಅಧಿಕಾರಿಗೆ, ನನ್ನ ಬಳಿ 25 ಸಾವಿರ ಹಣವಿಲ್ಲ, ನನ್ನ ಎತ್ತು ತೆಗೆದುಕೊಳ್ಳಿ ಎಂದ ರೈತ
ಹಾವೇರಿ : ಸವಣೂರು ಪುರಸಭೆಯಲ್ಲಿ ಲಂಚ ಕೇಳಿದ ಅಧಿಕಾರಿಗೆ, ನನ್ನ ಬಳಿ 25 ಸಾವಿರ ಹಣವಿಲ್ಲ, ನನ್ನ ಎತ್ತು ತೆಗೆದುಕೊಳ್ಳಿ ಎಂದು ರೈತನೊಬ್ಬ ಅಸಹಾಯಕತೆ ತೋಡಿಕೊಂಡ ಘಟನೆ ನಡೆದಿದೆ. ಮನೆ ಖಾತೆ ಬದಲಾಯಿಸಲು 25 ಸಾವಿರ ಲಂಚ ಕೊಡುವಂತೆ ಅಧಿಕಾರಿಯೊಬ್ಬ ಬೇಡಿಕೆ ಇಟ್ಟಿದ್ದ. ಎತ್ತು ಹಾಗೂ ಬಾರಕೋಲು ಸಮೇತ ಪುರಸಭೆಗೆ ರೈತ ಯಲ್ಲಪ್ಪ ರಾಣೋಜಿ ಬಂದಿದ್ದರು. ಈ ಹಿಂದೆ ಹಣ ಕೊಟ್ಟಿದ್ದೆ. ಹಣ ತೆಗೆದುಕೊಂಡವರು ವರ್ಗಾವಣೆಯಾಗಿದ್ದಾರೆ. ಈಗ ಹೊಸದಾಗಿ ಬಂದ ಅಧಿಕಾರಿಗಳು ಮತ್ತೆ 25 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಯಲ್ಲಪ್ಪ ಅಳಲು ತೋಡಿಕೊಂಡರು. ದುಡ್ಡು ಕೊಡುವ ತನಕ ಎತ್ತನ್ನು ನೀವೇ ಇಟ್ಟುಕೊಳ್ಳಿ ಎಂದು ಪುರಸಭೆ ಸಿಬ್ಬಂದಿಗೆ ರೈತ ಮನವಿ ಮಾಡಿದ. ಯಲ್ಲಪ್ಪನ ನಡೆಗೆ ಪುರಸಭೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಸುತ್ತಮುತ್ತಲಿನ ಜನ ಸೇರಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸರಿಯಾಗಿ ಬುದ್ಧಿ ಕಲಿಸಿದ ಯಲ್ಲಪ್ಪನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :