ಚನ್ನಪಟ್ಟಣದಲ್ಲಿ ನಾಳೆ (ಮಾರ್ಚ್ 12) 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ಸೀಬನಹಳ್ಳಿ ಪಿ. ಸ್ವಾಮಿ ಆಯ್ಕೆ
ಚನ್ನಪಟ್ಟಣ : ಬೊಂಬೆನಾಡು ಚನ್ನಪಟ್ಟಣ ನುಡಿ ಹಬ್ಬಕ್ಕೆ ಸಿದ್ಧವಾಗುತ್ತಿದೆ. ಚನ್ನಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾರ್ಚ್ 12ರಂದು 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದೆ. ಸಮ್ಮೇಳನಾಧ್ಯಕ್ಷರಾಗಿ ಸೀಬನಹಳ್ಳಿ ಪಿ.ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಅಂದು ನಗರದ ಗಾಂಧಿಭವನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಎಂ.ಜಿ.ರಸ್ತೆ ಮೂಲಕ ಮತ್ತು ಅಂಚೆ ಕಛೇರಿ ರಸ್ತೆ ಮೂಲಕ ಟಿ.ಕೆ.ರಾಮರಾವ್ ಮಹಾದ್ವಾರದ ಶತಮಾನೋತ್ಸವ ಭವನ ತಲುಪಲಿದೆ. ತಹಶೀಲ್ದಾರ್ ಮಹೇಂದ್ರ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಬಿ.ಟಿ.ನಾಗೇಶ್ ಕನ್ನಡ ಧ್ವಜ ಹಾರಿಸಲಿದ್ದಾರೆ. ತಾಪಂ. ಇಒ ಶಿವಕುಮಾರ್, ನಗರಸಭೆ ಆಯುಕ್ತ ಸಿ.ಪುಟ್ಟಸ್ವಾಮಿ, ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರಿಗೌಡ, ಸರ್ಕಲ್ ಇನ್ ಸ್ಪೆಕ್ಟರ್ ಶೋಭ ಅತಿಥಿಯಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ ತಿಳಿಸಿದರು.ಸಮ್ಮೇಳನಾಧ್ಯಕ್ಷ ಸೀಬನಹಳ್ಳಿ ಪಿ.ಸ್ವಾಮಿ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶಾಸಕ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಪುಸ್ತಕ ಬಿಡುಗಡೆ ಮಾಡುವರು. ಉದ್ಯಮಿ ಪ್ರಸನ್ನ ಪಿ.ಗೌಡ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಮುಖ್ಯಭಾಷಣ ಮಾಡುವರು. ಡಿವೈಎಸ್ಪಿ ಮೋಹನ್‌ಕುಮಾರ್, ಎಎಪಿ ನಾಯಕ ಶರತ್ ಚಂದ್ರ, ಕೇಂದ್ರ ಕಸಾಪ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಮುಂತಾದವರು ಭಾಗವಹಿಸುವರು. ನಂತರ ಹೊಸ ಶಿಕ್ಷಣ ನೀತಿ ಕುರಿತು ವಿಚಾರಗೋಷ್ಠಿ, ಕಾವ್ಯಮೇಳ, ಬಹಿರಂಗ ಅಧಿವೇಶನ, ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಉಪನ್ಯಾಸಕ ಡಾ.ಕೂಡ್ಲೂರು ವೆಂಕಟಪ್ಪ ಅಧ್ಯಕ್ಷತೆ ವಹಿಸುವರು. ವಿರಕ್ತ ಮಠದ ಶಿವರುದ್ರ ಮಹಾಸ್ವಾಮಿ ಸೇರಿದಂತೆ ಗಣ್ಯರು ಭಾಗವಹಿಸುವರು. ನಿವೃತ್ತ ಉಪನ್ಯಾಸಕ ಕೆ.ಎಂ.ಮಾಯಿಗೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಘಟಕದ ಕಾರ್ಯದರ್ಶಿ ರಾಮಕೃಷ್ಣಯ್ಯ, ಕೋಶಾಧ್ಯಕ್ಷ ಟಿ.ಎಸ್.ಶ್ರೀಕಾಂತ್, ನಿಕಟಪೂರ್ವ ಅಧ್ಯಕ್ಷ ಚಲುವರಾಜು ಉಪಸ್ಥಿತರಿದ್ದರು.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :