ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಸ್ಮರಣಾರ್ಥ ‘ಮಾ’ ಮೈಕ್ರೊಸೈಟ್‌ (ವೆಬ್ ಪೇಜ್) ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅವರ ತಾಯಿ ಹೀರಾಬೆನ್ ಮೋದಿ ಸ್ಮರಣಾರ್ಥ ‘ಮಾ’ ಎಂಬ ಮೈಕ್ರೊಸೈಟ್‌ (ವೆಬ್‌ ಪೇಜ್‌) ಆರಂಭಿಸಲಾಗಿದೆ. ‘ಹೀರಾಬೆನ್ ಅವರ ಸ್ಮರಣಾರ್ಥ ‘ಮಾ’ ಮೈಕ್ರೊಸೈಟ್‌ ಆರಂಭಿಸಲಾಗಿದೆ. ಜಗತ್ತಿನಾದ್ಯಂತ ಮಾ.8ರಂದು ಮಹಿಳಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ತಾಯಿಗೆ ಗೌರವ ಸೂಚಕವಾಗಿ ಇದನ್ನು ಆರಂಭಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ತಾಯಿ ನಡುವಿನ ಪ್ರೀತಿ ಬಾಂಧವ್ಯವನ್ನು ಸೆರೆಹಿಡಿದ ಫೋಟೊ ಮತ್ತು ವಿಡಿಯೊಗಳನ್ನು ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೀರಾಬೆನ್ ಅವರು ಮಕ್ಕಳಿಗೆ ಹೇಳಿದ ನೀತಿಪಾಠಗಳು, ತಾಯಿಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮೋದಿ ಅವರು ಬರೆದ ಲೇಖನವನ್ನು ಪ್ರಕಟಿಸಲಾಗಿದೆ. ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಕಳೆದ ವರ್ಷ ಡಿ.30ರಂದು ಮೃತಪಟ್ಟಿದ್ದಾರೆ.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

Leave a Reply

Your email address will not be published. Required fields are marked *