ಬಿಜೆಪಿ ಸಂಭಾವ್ಯ ಅಭ್ಯರ್ಥಿಯಿಂದ ಕೆ.ಆರ್. ಪ್ರಸಾದ್ ಗೌಡ ಅವರಿಂದ 15X20 ಅಡಿ ಅಳತೆ ನಿವೇಶನಗಳ ಉಡುಗೊರೆ
ಮಾಗಡಿ : ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಮತದಾರರಿಗೆ ನಗದು, ಉಡುಗೊರೆಗಳನ್ನು ಹಂಚುತ್ತಿದ್ದ ಸಂಭಾವ್ಯ ಅಭ್ಯರ್ಥಿಗಳು ಇದೀಗ ನಿವೇಶನದಂತಹ ಭಾರಿ ಉಡುಗೊರೆ ನೀಡಲು ಮುಂದಾಗಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ಪ್ರಸಾದ್ ಗೌಡ, ತನ್ನ ಕ್ಷೇತ್ರದ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ಮಂದಿಗೆ 15X20 ಅಡಿ ಅಳತೆಯ ನಿವೇಶನ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿಯೇ ಘೋಷಣೆ ಮಾಡಿದ್ದಾರೆ. ಒಟ್ಟು 10 ಎಕರೆಯಲ್ಲಿ ಬಡವರು, ನಿರ್ಗತಿಕರಿಗಾಗಿ ನಿವೇಶನ ನೀಡಲು ಯೋಜಿಸಿದ್ದು, ಇದಕ್ಕೆ ಬಿಡದಿ ಬಳಿಯ ಕೆಂದಪ್ಪನಹಳ್ಳಿಯಲ್ಲಿ ತನ್ನ ತಂದೆಯ ಹೆಸರಿನಲ್ಲಿ ಇರುವ ನಾಲ್ಕು ಎಕರೆ ಜಮೀನಿನ ಜೊತೆಗೆ ಅಗತ್ಯವಿರುವ ಇನ್ನಷ್ಟು ಜಮೀನಿನ ಖರೀದಿ ನಡೆದಿದೆ. ಜಿಲ್ಲಾಧಿಕಾರಿ ಇದರ ಭೂಪರಿವರ್ತನೆ ಮಾಡಿಕೊಟ್ಟ ಬಳಿಕ ಲೇಔಟ್ ನಿರ್ಮಿಸ ಲಿದ್ದು, ಚುನಾವಣೆ ವೇಳೆಗೆ ಹಂಚುತ್ತೇನೆ ಎಂದು ಪ್ರಸಾದ್ ಗೌಡ ತಿಳಿಸಿದ್ದಾರೆ. ಮಾಗಡಿ ಕ್ಷೇತ್ರದ ವ್ಯಾಪ್ತಿಯ ಬಡ ವರ್ಗದ ಮತದಾರರು ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯ ಜೊತೆಗೆ ಅರ್ಜಿ ಸಲ್ಲಿಸು ವಂತೆಯೂ ಅವರು ಆಹ್ವಾನಿಸಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಇನ್ನೂ ಅಂತಿಮಗೊಂಡಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಪ್ರಸಾದ್ ಗೌಡ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು ಈ ಹಿಂದೆ ಮತದಾರರಿಗೆ ಚಿನ್ನದ ಮೂಗುತಿ, ಗರ್ಭಿಣಿಯರಿಗೆ ಸೀಮಂತ ಮೊದಲಾದ ಕಾರ್ಯಕ್ರಮಗಳನ್ನು ಪ್ರಸಾದ್ ಗೌಡ ಮಾಡಿದ್ದಾರೆ.
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :