ಜವಳಗೆರೆದೊಡ್ಡಿ ಗ್ರಾಮದಲ್ಲಿ ಆನೆ ದಾಳಿ : ಫಸಲು ನಾಶ

ರಾಮನಗರ : ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜವಳಗೆರೆದೊಡ್ಡಿ ಗ್ರಾಮದಲ್ಲಿ ಐದು ಆನೆಗಳ ಹಿಂಡು ದಾಳಿ ನಡೆಸಿ ವಿವಿಧ ರೈತರ ಹೊಲಗಳಲ್ಲಿನ ಫಸಲುಗಳನ್ನು ನಾಶಪಡಿಸಿವೆ. ತಾಯಮ್ಮ, ವಾಸು ಪುಟ್ಟಮಾಸ್ತಿಗೌಡ, ರಾಮಕೃಷ್ಣಯ್ಯ, ತಾಯಕ್ಕ, ಸುಶೀಲಮ್ಮ ಎಂಬ ರೈತರ ಜಮೀನಿನಲ್ಲಿನ ತೆಂಗಿನಮರ, ಎಳನೀರು, ಮಾವು, ಸೀಮೆಹುಲ್ಲು, ನೀರಾವರಿ ಪರಿಕರ, ಬಾಳೆ, ರೇಷ್ಮೆ ತೋಟ ನಾಶವಾಗಿದೆ. ತೆಂಗಿನಕಲ್ಲು ಅರಣ್ಯದಿಂದ ಬಂದಿರುವ ಆನೆಗಳ ಹಿಂಡು ಹಂದಿಗೊಂದಿ ಅರಣ್ಯ ಸೇರಿ ಜವಳಗೆರೆದೊಡ್ಡಿ ಗ್ರಾಮದ ಎಲ್ಲೆಗೆ ಬಂದು ಹೊಲಕ್ಕೆ ಲಗ್ಗೆ ಇಟ್ಟಿವೆ. ಆನೆಗಳ ದಾಳಿಯಿಂದ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಫಸಲು ನಾಶವಾಗಿವೆ. ಇದರಿಂದ ನಾವು ಪದೇ ಪದೇ ಆರ್ಥಿಕ ನಷ್ಟ ಹೊಂದುವಂತಾಗಿದೆ. ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಸೇರಿಸಿ ಪದೇ ಪದೇ ಆನೆಗಳು ಹಂದಿಗೊಂದಿ ಅರಣ್ಯಕ್ಕೆ ಬರುವುದನ್ನು ತಪ್ಪಿಸಬೇಕು. ಸರ್ಕಾರ ರೈತರ ಫಸಲು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುತ್ತಿಲ್ಲ. ನಮಗೆ ಪರಿಹಾರಕ್ಕಿಂತ ಮುಖ್ಯವಾಗಿ ಆನೆಗಳು ಕಾಡಿಗೆ ಮರಳಬೇಕು ಎಂದು ರೈತ ವಾಸುಪುಟ್ಟಮಾಸ್ತಿಗೌಡ ತಿಳಿಸಿದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

Leave a Reply

Your email address will not be published. Required fields are marked *