ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಆರೋಗ್ಯ ದಿನ ಆಚರಣೆ

ಹಾಯ್ ರಾಮನಗರ ಡಾಟ್ ಇನ್ ಸುದ್ದಿ.

ರಾಮನಗರ : ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಮನಗರ ಜಿಲ್ಲಾ ಶಾಖೆ ವತಿಯಿಂದ ಹಿರಿಯ ವೈದ್ಯರಾದ ಡಾ.ಕೆ.ಪಿ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷರಾದ ವಿ. ಬಾಲಕೃಷ್ಣ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಬಡವರ ವೈದ್ಯ, ಸಮಾಜ ಸೇವಕ ಡಾ.ಕೆ.ಪಿ. ಹೆಗ್ಡೆ ಅವರನ್ನು ಸನ್ಮಾನಿಸುತ್ತಿದ್ದೇವೆ. ಡಾ.ಕೆ.ಪಿ. ಹೆಗ್ಡೆ ಅವರು ವೈದ್ಯ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ ಡಾ.ಕೆ.ಪಿ. ಹೆಗ್ಡೆ ಅವರು ವೈದ್ಯರಾಗಿ, ಪ್ರತ್ರಕರ್ತರಾಗಿ, ಶೈಕ್ಷಣಿಕ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಈಗಲೂ ಅವರು ಹಣವಿಲ್ಲದವರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಡಾ.ಕೆ.ಪಿ. ಹೆಗ್ಡೆ ಅವರ ಕಾರ್ಯವೈಖರಿ ಇತರೆ ವೈದ್ಯರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಮಾತನಾಡಿ ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕ ಸತ್ಯ. ಆರೋಗ್ಯವೊಂದಿದ್ದರೆ ಏನಾದರೂ ಸಾಧಿಸಬಹುದು. ಇದೇ ಕಾರಣಕ್ಕೆ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡಬೇಕು. ಇದೇ ಏಪ್ರಿಲ್ 7 ರಂದು ಜಗತ್ತಿನಾದ್ಯಂತ ಜಾಗತಿಕ ಆರೋಗ್ಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮದ ಕಾಳಜಿ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

1948 ರಲ್ಲಿ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ಕಾಳಜಿಗೆ ಉತ್ತೇಜಿಸುವುದರ ಜೊತೆಗೆ ದುರ್ಬಲರಿಗೆ ಸೇವೆ ನೀಡಲು ಮತ್ತು ಜಗತ್ತನ್ನು ಆರೋಗ್ಯಯುತವಾಗಿ ಸುರಕ್ಷಿತವಾಗಿರಿಸುವ ಉದ್ದೇಶ ಹೊಂದಿದೆ. ಈ ಮೂಲಕ ಜಗತ್ತಿನ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಮತ್ತು ಜೀವನ ಶೈಲಿ ಹೊಂದುವಂತೆ ಒತ್ತು ನೀಡುತ್ತದೆ. 1950 ರಲ್ಲಿ ಏಪ್ರಿಲ್ 7 ರಂದು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯಯುತ ಜೀವನ ಮತ್ತು ಯೋಗಕ್ಷೇಮಕ್ಕೆ ಪ್ರೋತ್ಸಾಹಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಖಜಾಂಚಿ ಎಂ. ಪರಮಶಿವಯ್ಯ, ಸಹ ಕಾರ್ಯದರ್ಶಿ ಕೆ.ಎಚ್. ಚಂದ್ರಶೇಖರಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್. ಶಂಕರಯ್ಯ, ಆಸ್ಪತ್ರೆಯ ಸಿಬ್ಬಂದಿ ನಂದಿನಿ, ಆಶಾ ಇದ್ದರು.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

ಟ್ವಿಟರ್ : http://twitter.com/hairamanagara

ಎಸ್. ರುದ್ರೇಶ್ವರ

ಸಹೃದಯ ಓದುಗರೆ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸಾಮಾಜಿಕ, ವ್ಯಾಪಾರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಮನಗರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿ ಜತೆಗೆ ‘ರಾಮನಗರ ಜಿಲ್ಲೆ’ಯ ಇತಿಹಾಸವನ್ನು ‘ಹಾಯ್ ರಾಮನಗರ’ http://hairamanagara.in ಮೂಲಕ ತಿಳಿಸಲಾಗುವುದು. ಬ್ರೇಕಿಂಗ್ ವರದಿಗಳಿಗಾಗಿ ಆತುರ ಪಟ್ಟು ವರದಿಗಳನ್ನು ನೀಡುವುದಿಲ್ಲ. ವರದಿಗಳ ಖಚಿತತೆ ಲಭ್ಯವಾದ ನಂತರವಷ್ಟೆ ಪ್ರಕಟಿಸಲಾಗುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಜನರು ಒಂದೇ ಕ್ಲಿಕ್ ಮೂಲಕ ತಿಳಿದು ಕೊಳ್ಳಬಹುದು. ವಸ್ತುನಿಷ್ಠ ವರದಿಗಳನ್ನು ನೀಡುವುದು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಮಾಹಿತಿ ನೀಡಲಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ….. ರಾಮನಗರ ಜಿಲ್ಲೆಯ ಸುದ್ದಿಗಳಿಗಾಗಿ “ಹಾಯ್ ರಾಮನಗರ ಡಾಟ್ ಇನ್” ಓದುತ್ತಿರಿ. ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ – ಎಸ್. ರುದ್ರೇಶ್ವರ ಎಂ.ಎ., ಎಂ.ಫಿಲ್., ಬಿ.ಇಡಿ

Leave a Reply

Your email address will not be published. Required fields are marked *