ರಾಮನಗರ ಜಿಲ್ಲೆಯಲ್ಲಿ ಫುಲ್ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ
ರಾಮನಗರ ಜಿಲ್ಲೆಯಲ್ಲಿ ಫುಲ್ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ
ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ
ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ
ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆ ಇದೆ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ
ರಾಮನಗರ : ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಬಹುತೇಕ ಫಿಕ್ಸ್ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಮಾಡುವುದೊಂದೇ ಬಾಕಿ ಇದೆ. ಕೊನೆ ಕ್ಷಣದ ವರೆಗೂ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬಹುತೇಕ ಸಿಎಂ ಸ್ಥಾನ ಕೈತಪ್ಪಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಡಿಕೆ ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರದಲ್ಲಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆಗಳು ಇವೆ. ಇದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಂದೇಶ ರವಾನಿಸಲಾಗಿದೆ. ರಾಮನಗರದ ಐಜೂರು ವೃತ್ತದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ, ಒಬ್ಬರು ಸಬ್ ಇನ್ ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಹೃದಯ ಓದುಗರೆ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸಾಮಾಜಿಕ, ವ್ಯಾಪಾರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಮನಗರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿ ಜತೆಗೆ ‘ರಾಮನಗರ ಜಿಲ್ಲೆ’ಯ ಇತಿಹಾಸವನ್ನು ‘ಹಾಯ್ ರಾಮನಗರ’ https://hairamanagara.in ಮೂಲಕ ತಿಳಿಸಲಾಗುವುದು. ಬ್ರೇಕಿಂಗ್ ವರದಿಗಳಿಗಾಗಿ ಆತುರ ಪಟ್ಟು ವರದಿಗಳನ್ನು ನೀಡುವುದಿಲ್ಲ. ವರದಿಗಳ ಖಚಿತತೆ ಲಭ್ಯವಾದ ನಂತರವಷ್ಟೆ ಪ್ರಕಟಿಸಲಾಗುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಜನರು ಒಂದೇ ಕ್ಲಿಕ್ ಮೂಲಕ ತಿಳಿದು ಕೊಳ್ಳಬಹುದು. ವಸ್ತುನಿಷ್ಠ ವರದಿಗಳನ್ನು ನೀಡುವುದು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಮಾಹಿತಿ ನೀಡಲಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ… ರಾಮನಗರ ಜಿಲ್ಲೆಯ ಸುದ್ದಿಗಳಿಗಾಗಿ “ಹಾಯ್ ರಾಮನಗರ ಡಾಟ್ ಇನ್” ಓದುತ್ತಿರಿ. ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ – ಎಸ್. ರುದ್ರೇಶ್ವರ ಎಂ.ಎ., ಎಂ.ಫಿಲ್., ಬಿ.ಇಡಿ
ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/IY8d8seeQSCIZewIP8uKdh
‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :
https://www.facebook.com/HaiRamanagara?mibextid=ZbWKwL
ಟ್ವಿಟರ್ : http://twitter.com/hairamanagara