ನಾನು ರಾಮನ ಭಕ್ತ ; ನವರಾಮನಗರ ನಿರ್ಮಾಣ ನನ್ನ ಗುರಿ : ಎಚ್.ಎ. ಇಕ್ಬಾಲ್ ಹುಸೇನ್

ರಾಮನಗರ : ನಾನು ರಾಮನಭಕ್ತ, ನವರಾಮನಗರ ನಿರ್ಮಾಣ ಮಾಡುವುದು ಹಾಗೂ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನನ್ನ ಗುರಿ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಈಗಲೇ ನಾನು ಏನನ್ನೂ ಹೇಳುವುದಿಲ್ಲ. ಕಳೆದ 20 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ರಾಮನಗರ ತಾಲ್ಲೂಕಿನ ಅಭಿವೃದ್ಧಿಯನ್ನು ಮಾಡುವುದಕ್ಕೆ ಆದ್ಯತೆ ನೀಡುತ್ತೇನೆ ಎಂದರು.

ಸೇವೆ ಮಾಡಲು ನನಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಸೂರು-ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಅಭಿವೃದ್ಧಿ ಮಾಡಲು ನನಗೆ ಎಲ್ಲರೂ ಸಹಕಾರ ನೀಡಬೇಕು. ಲಂಚ ತೆಗೆದುಕೊಳ್ಳುವ ವ್ಯಕ್ತಿ ನಾನನಲ್ಲ. ರಾಮನಗರದಲ್ಲಿ ಹಿಂದಿನ ವರ್ಷಗಳಲ್ಲಿ ಲಂಚ ತಾಂಡವಾವಾಡುತ್ತಿತ್ತು. ನಾನು ಲಂಚ ತೆಗೆದುಕೊಳ್ಳುವುದಿಲ್ಲ. ನನಗೆ ಹಣ, ಅಧಿಕಾರದ ಆಸೆ ಇಲ್ಲ ಎಂದು ತಿಳಿಸಿದರು.

ನಾವು ಕೊಟ್ಟಿರುವ ಗಿಫ್ಟ್ ಕಾರ್ಡ್ ಪ್ರಕಾರ ಒಂದು ತಿಂಗಳೊಳಗಾಗಿ ಮತ್ತೆ ಗಿಫ್ಟ್ ನೀಡುತ್ತೇವೆ. ಗಿಫ್ಟ್ ಕಾರ್ಡ್ ನೀಡಿರುವುದು ಚುನಾವಣಾ ತಂತ್ರಗಾರಿಕೆಯಷ್ಟೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ರಾಜು, ನಗರಸಭಾ ಸದಸ್ಯ ಕೆ. ಶೇಷಾದ್ರಿ, ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಎ.ಬಿ. ಚೇತನ್ ಕುಮಾರ್, ರಾಜು, ಪರ್ವೀಜ್ ಪಾಷಾ, ಬಿ.ಸಿ. ಪಾರ್ವತಮ್ಮ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

ಎಸ್. ರುದ್ರೇಶ್ವರ

ಸಹೃದಯ ಓದುಗರೆ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸಾಮಾಜಿಕ, ವ್ಯಾಪಾರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಮನಗರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿ ಜತೆಗೆ ‘ರಾಮನಗರ ಜಿಲ್ಲೆ’ಯ ಇತಿಹಾಸವನ್ನು ‘ಹಾಯ್ ರಾಮನಗರ’ https://hairamanagara.in ಮೂಲಕ ತಿಳಿಸಲಾಗುವುದು. ಬ್ರೇಕಿಂಗ್ ವರದಿಗಳಿಗಾಗಿ ಆತುರ ಪಟ್ಟು ವರದಿಗಳನ್ನು ನೀಡುವುದಿಲ್ಲ. ವರದಿಗಳ ಖಚಿತತೆ ಲಭ್ಯವಾದ ನಂತರವಷ್ಟೆ ಪ್ರಕಟಿಸಲಾಗುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಜನರು ಒಂದೇ ಕ್ಲಿಕ್ ಮೂಲಕ ತಿಳಿದು ಕೊಳ್ಳಬಹುದು. ವಸ್ತುನಿಷ್ಠ ವರದಿಗಳನ್ನು ನೀಡುವುದು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಮಾಹಿತಿ ನೀಡಲಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ… ರಾಮನಗರ ಜಿಲ್ಲೆಯ ಸುದ್ದಿಗಳಿಗಾಗಿ “ಹಾಯ್ ರಾಮನಗರ ಡಾಟ್ ಇನ್” ಓದುತ್ತಿರಿ. ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ – ಎಸ್. ರುದ್ರೇಶ್ವರ ಎಂ.ಎ., ಎಂ.ಫಿಲ್., ಬಿ.ಇಡಿ

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

ಟ್ವಿಟರ್ : http://twitter.com/hairamanagara

Leave a Reply

Your email address will not be published. Required fields are marked *